261 ಜನರ ಪ್ರಾಣ ಉಳಿಸಿದ ಮಹಿಳಾ ಪೈಲಟ್‌ ಅನುಪಮಾ

news | Tuesday, February 13th, 2018
Suvarna Web Desk
Highlights

ಮಹಿಳಾ ಪೈಲಟ್‌ ಒಬ್ಬರ ಜಾಣ್ಮೆಯಿಂದ ಏರ್‌ ಇಂಡಿಯಾ-ವಿಸ್ತಾರ ವಿಮಾನಗಳ ನಡುವೆ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ತಪ್ಪಿದೆ. ಏರಿಂಡಿಯಾದ ಕ್ಯಾಪ್ಟನ್‌ ಅನುಪಮಾ ಕೊಹ್ಲಿ ಅವರ ಸಮಯ ಪ್ರಜ್ಞೆಯಿಂದ ಎರಡೂ ವಿಮಾನಗಳಲ್ಲಿನ 261 ಪ್ರಯಾಣಿಕರ ಜೀವ ಉಳಿದಿದೆ.

ನವದೆಹಲಿ: ಮಹಿಳಾ ಪೈಲಟ್‌ ಒಬ್ಬರ ಜಾಣ್ಮೆಯಿಂದ ಏರ್‌ ಇಂಡಿಯಾ-ವಿಸ್ತಾರ ವಿಮಾನಗಳ ನಡುವೆ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ತಪ್ಪಿದೆ. ಏರಿಂಡಿಯಾದ ಕ್ಯಾಪ್ಟನ್‌ ಅನುಪಮಾ ಕೊಹ್ಲಿ ಅವರ ಸಮಯ ಪ್ರಜ್ಞೆಯಿಂದ ಎರಡೂ ವಿಮಾನಗಳಲ್ಲಿನ 261 ಪ್ರಯಾಣಿಕರ ಜೀವ ಉಳಿದಿದೆ.

ಫೆ. 7ರಂದು ಮುಂಬೈ ವಾಯುವಲಯದಲ್ಲಿ ವಿಸ್ತಾರ ಮತ್ತು ಏರಿಂಡಿಯಾ ವಿಮಾನಗಳು, ವೈಮಾನಿಕ ನಿಯಮಗಳಿಗೆ ವಿರುದ್ಧವಾಗಿ ಪರಸ್ಪರ ಕೇವಲ 100 ಅಡಿ ಅಂತರದಲ್ಲೇ ಹಾರಾಟ ನಡೆಸುತ್ತಿದ್ದವು. ಈ ವೇಳೆ ವಿಮಾನದಲ್ಲಿನ ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಯ ನೀಡಿದ ಸಂದೇಶವನ್ನು ತಕ್ಷಣವೇ ಗಮಿನಿಸಿದ ಏರಿಂಡಿಯಾದ ಮಹಿಳಾ ಕ್ಯಾಪ್ಟನ್‌ ಅನುಪಮಾ ಕೊಹ್ಲಿ, ತಕ್ಷಣವೇ ತಮ್ಮ ವಿಮಾನವನ್ನು ಸುರಕ್ಷಿತ ದೂರಕ್ಕೆ ಕೊಂಡೊಯ್ಯುವ ಮೂಲಕ ಸಂಭವನೀಯ ಅಪಘಾತವನ್ನು ತಪ್ಪಿಸಿದ್ದಾರೆ.

ಈ ಘಟನೆ ನಡೆಯುವಾಗ ವಿಸ್ತಾರ ವಿಮಾನದಲ್ಲಿ 152 ಪ್ರಯಾಣಿಕರು ಮತ್ತು ಏರಿಂಡಿಯಾದಲ್ಲಿ 109 ಪ್ರಯಾಣಿಕರು ಇದ್ದರು. ಘಟನೆ ಕುರಿತು ಇದೀಗ ತನಿಖೆಗೆ ಆದೇಶಿಸಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk