ಬಾಡಿಗೆ ಕೇಳಿದ ಮಾಲಿಕನ ರುಂಡ-ಮುಂಡ ಬೇರ್ಪಡಿಸಿದರು..!

news | Friday, February 2nd, 2018
Suvarna Web Desk
Highlights

ಬಾಡಿಗೆ ಕೇಳಲು ಹೋದ ಜಮೀನು ಮಾಲೀಕನನ್ನೇ ಕೊಲೆ ಮಾಡಿ ಆತನ ರುಂಡ ,ಮುಂಡ ಬೇರ್ಪಡಿಸಿದ ಕೊಲೆಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ಗ್ರಾಮಾಂತರ ಠಾಣಾವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನೆಲಮಂಗಲ: ಬಾಡಿಗೆ ಕೇಳಲು ಹೋದ ಜಮೀನು ಮಾಲೀಕನನ್ನೇ ಕೊಲೆ ಮಾಡಿ ಆತನ ರುಂಡ ,ಮುಂಡ ಬೇರ್ಪಡಿಸಿದ ಕೊಲೆಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ಗ್ರಾಮಾಂತರ ಠಾಣಾವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿ ಅರೆಕ್ಸ್ ಮಂಜು ಉರುಫ್ ಮಂಜುನಾಥ್(37). ಮೂಲತಃ ನೆಲಮಂಗಲದ ರಾಯನಗರ ನಿವಾಸಿ.

ಕೊಲೆಯಾದ ಆತ ತನ್ನ ಜಮೀನನ್ನು ಅಲ್ತಾಫ್ (45) ಎಂಬ ವ್ಯಕ್ತಿಗೆ ಬಾಡಿಗೆ ನೀಡಿದ್ದರು. ಬಾಡಿಗೆದಾರ ಸರಿಯಾಗಿ ಬಾಡಿಗೆ ನೀಡದೆ ಇದ್ದಾಗ ಅದನ್ನು ಕೇಳಲು ಹೋದ ಮಾಲೀಕನನ್ನು, ಅಲ್ತಾಫ್ ಹಾಗೂ ಆತನ ಮಕ್ಕಳು ಕೊಲೆ ಮಾಡಿದ್ದಾರೆ. ರುಂಡವನ್ನು ಜಮೀನಿನಲ್ಲಿ ಹೂತು ಹಾಕಿ ಮುಂಡವನ್ನು ಕೆಂಗೇರಿಯ ಬಳಿ ಬಿಸಾಕಿದ್ದಾರೆ.

ಮಂಜುನಾಥ್ ಕಾಣೆಯಾಗಿರುವ ಕುರಿತಾಗಿ ಈತನ ಅಣ್ಣ ನಾಗರಾಜ್ ದೂರು ನೀಡಿದ್ದರು. ಜಮೀನಿನಲ್ಲಿ ಕೆಲಸಕ್ಕೆಂದು ತೆರಳಿದ್ದಾತ ಅನುಮಾನಾಸ್ಪದವಾಗಿ ಕಾಣೆಯಾಗಿದ್ದಾನೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜ.24ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಬೆಂಗಳೂರು ಸಿಸಿಬಿ ಪೊಲೀಸರು ಬಾಡಿಗೆದಾರ ಅಲ್ತಾಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಲ್ತಾಫ್ (45) ಹಾಗೂ ಅವರ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.

Comments 0
Add Comment

    ಮಾನವೀಯ ಮರೆತ ಜನ :ಮಕ್ಕಳ ಕಳ್ಳನೆಂದು ಹಲ್ಲೆಗೀಡದ ವ್ಯಕ್ತಿ ಸಾವು

    news | Wednesday, May 23rd, 2018