ತುಮಕೂರಿನ ವಸತಿ ಶಾಲೆಯೊಂದರಲ್ಲಿ ಸಾವನ್ನಪ್ಪಿದ್ದ ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರದಲ್ಲಿ ವಿಷ ಇರುವುದು ಸಾಬೀತಾಗಿದೆ. ಶವ ಪರೀಕ್ಷೆ ನಡೆಸಿರುವ ವೈದ್ಯರೇ ಊಟದಲ್ಲಿ ವಿಷ ಇರುವುದನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಈ ದುರಂತದ ಹಿಂದಿನ ಕೈವಾಡದ ಬಗ್ಗೆ ಪೊಲೀಸರು ತನಿಖೆ ತೀವ್ರ ಮಾಡಬೇಕಾಗಿದೆ.
ತುಮಕೂರು(ಮಾ.11): ತುಮಕೂರಿನ ವಸತಿ ಶಾಲೆಯೊಂದರಲ್ಲಿ ಸಾವನ್ನಪ್ಪಿದ್ದ ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರದಲ್ಲಿ ವಿಷ ಇರುವುದು ಸಾಬೀತಾಗಿದೆ. ಶವ ಪರೀಕ್ಷೆ ನಡೆಸಿರುವ ವೈದ್ಯರೇ ಊಟದಲ್ಲಿ ವಿಷ ಇರುವುದನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಈ ದುರಂತದ ಹಿಂದಿನ ಕೈವಾಡದ ಬಗ್ಗೆ ಪೊಲೀಸರು ತನಿಖೆ ತೀವ್ರ ಮಾಡಬೇಕಾಗಿದೆ.
ವಿದ್ಯಾ ವಾರಿಧಿ ಇಂಟರ್ ನ್ಯಾಷನಲ್ ವಸತಿ ಶಾಲೆಯಲ್ಲಿನ ಮಕ್ಕಳು ಸಾವನ್ನಪ್ಪಿದ್ದು ವಿಷಾಹಾರ ಸೇವನೆಯಿಂದಲೇ ಊಟದಲ್ಲಿ ವಿಷ ಬೆರೆಸಿದ್ದು ಸತ್ಯ. ಹೀಗಂತ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಆದರೆ ಯಾವ ರೂಪದ ವಿಷ ಬೆರೆಸಿದ್ದಾರೆ.. ಯಾರು ವಿಷ ಬೆರೆಸಿದ್ದಾರೆ ಉತ್ತರ ಸಿಕ್ಕಿಲ್ಲ. ಇದೇ ದೆಸೆಯಲ್ಲಿ ಪೊಲೀಸರು ತನಿಖೆ ಕೂಡ ತೀವ್ರಗೊಳಿಸಿದ್ದಾರೆ.
ಇನ್ನೂ ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದಾರಲ್ವಾ ಇವರೆಲ್ಲಾ ರಾತ್ರಿ 9 ಗಂಟೆ ನಂತರ ಊಟ ಮಾಡಿದವರು. ಇದಕ್ಕೂ ಮುನ್ನ ಊಟ ಮಾಡಿದ ನಮಗೆ ಏನು ಅಗಿಲ್ಲ ಅಂತಾ ಹಾಸ್ಟೆಲ್ ಶಿಕ್ಷಕ ಹಾಗೂ ಶಾಲೆಯ ಕಾರ್ಯದರ್ಶಿ ಕವಿತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.. ಇದು ಹಲವು ಅನುಮಾನ ಹುಟ್ಟು ಹಾಕುತ್ತಿದೆ. ಉದ್ದೇಶ ಪೂರ್ವಕವಾಗೇ ಮಕ್ಕಳ ಊಟಕ್ಕೂ ಮುನ್ನ ವಿಷ ಬೆರೆಸಿದ್ದಾರೆ ಅನ್ನೋ ಅನುಮಾನ ಬಲವಾಗುತ್ತಿದೆ.
ಕೃಷಿ ಕ್ರಿಮಿನಾಶಕದಂತಹ ಔಷಧಿ ಬಳಸಿದ್ದಾರೆ ಎನ್ನುವ ಅನುಮಾನ ವೈದ್ಯರದ್ದು. ಏನೇ ಆದರೂ ಪೊಲೀಸರ ತನಿಖೆ ಹಾಗೂ ಎಫ್ ಎಸ್ ಎಲ್ ವರದಿಯಿಂದಲೇ ನಿಖರವಾಗಿ ಗೊತ್ತಾಗಬೇಕಿದೆ. ಇತ್ತ ಶಾಲೆ ಮುಖ್ಯಸ್ಥ ಕಿರಣ್ ಕುಮಾರ್ ಕೂಡ ಪತ್ನಿ
