ದೇಶದೆಲ್ಲೆಡೆ ಹಣಕ್ಕಾಗಿ ಹಾಹಾಕಾರ ಶುರುವಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ಗಳಲ್ಲಿ 500, 1000 ಹಳೆ ನೋಟು ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದ್ರೆ ಕಿದ್ವಾಯಿ  ಆಸ್ಪತ್ರೆಯಲ್ಲಿ 500, 1000 ಹಳೆ ನೋಟುಗಳನ್ನು ಪಡೆಯೋದಿಲ್ಲ ಎಂದು ಸ್ಪಷ್ಟವಾಗಿ ಬೋರ್ಡ್ ಹಾಕಲಾಗಿದೆ. ಹೀಗಾಗಿ ರೋಗಿಗಳು ಪರದಾಡ್ತಿದಾರೆ. ಕಳೆದೆರಡು ದಿನಗಳಿಂದ ಮೆಡಿಕಲ್​ಲ್ಲಿ ಚಿಲ್ಲರೆ ನೀಡದೆ ರೋಗಿಗಳು, ರೋಗಿ ಸಂಬಂಧಿಕರು ಸಂಕಷ್ಟಕ್ಕೀಡಾಗಿದ್ದಾರೆ. ಚಿಲ್ಲರೆ ಬೇಕಾದ್ರೆ ವೈದ್ಯರ ಸಹಿ ಪಡೆದು ಮೆಡಿಸಿನ್ ಸ್ಲಿಪ್ ತರುವಂತೆ ಮೆಡಿಕಲ್ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ಇತ್ತ ಆಸ್ಪತ್ರೆಯಲ್ಲಿ ವೈದ್ಯರುಗಳು ಎರಡನೆ ಶನಿವಾರವೆಂದು ವೈದ್ಯರುಗಳು ಡ್ಯೂಟಿಗೆ ಬಂದಿಲ್ಲ. ಹೀಗಾಗಿ ರೋಗಿಗಳಿಗೆ ದಿಕ್ಕು ತೋಚದಂತಾಗಿದೆ.