ಮೊಬೈಲ್​ ಕದ್ದಿದ್ದಕ್ಕೆ ಯುವಕನನ್ನು ತಲೆ ಕೆಳಕಾಗಿ ನೇತು ಹಾಕಿ ಥಳಿಸಿರುವ ಅಮಾನವಿಯ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು(ಸೆ.24): ಮೊಬೈಲ್​ ಕದ್ದಿದ್ದಕ್ಕೆ ಯುವಕನನ್ನು ತಲೆ ಕೆಳಕಾಗಿ ನೇತು ಹಾಕಿ ಥಳಿಸಿರುವ ಅಮಾನವಿಯ ಘಟನೆ ಮೈಸೂರಿನಲ್ಲಿ ನಡೆದಿದೆ.

ನಿರ್ಮಾಣ ಹಂತದಲ್ಲಿರುದ ಕಟ್ಟಡ ಕಾಮಗಾರಿ ನೋಡಿಕೊಳ್ಳುವ ಮೇಸ್ತ್ರಿ ಹಾಗೂ ಸಿಬ್ಬಂದಿಯಿಂದ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇನ್ನೂ ಘಟನೆ ನೋಡಿಯೂ ಯುವಕನ ರಕ್ಷಣೆಗೆ ಲ್ಲಿನ ಲಕ್ಷ್ಮಿಂ ಪುರಂ ಠಾಣಾ ಪೊಲೀಸರು ಬರಲಿಲ್ಲ.

ನಗರದ ಆರ್ ಟಿ ಒ ರಸ್ತೆಯ ಡಬ್ಬಲ್ ಟ್ಯಾಂಕ್ ಬಳಿ ಇರುವ ಫ್ರೆಂಡ್ಲಿ ಮೋಟಾರ್ಸ್ ಕಂಪನಿಗೆ ಸೇರಿದ ಬಿಲ್ಡಿಂಗ್​ನಲ್ಲಿ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಯುವಕ ಕೈ ಮುಗಿದು ಬೇಡಿಕೊಂಡ್ರೂ ಬಿಡದೆ ಮುಖ ಮುಸಿಡಿ ನೋಡದೆ ಥಳಿಸಿದ ಸಿಬ್ಬಂದಿಗಳು.

ಮಾಧ್ಯಮದವರನ್ನು ಕಂಡ ಬಳಿಕ ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.