ಹೊರಾನಾಡಿಗೆ ಹೋಗುವ ಭಕ್ತರೇ ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಇಲ್ಲಿಗೆ ತೆರಳುವ ಮುನ್ನ ಇಲ್ಲಿರುವ ಸೇತುವೆಯ ಬಗ್ಗೆ ನೀವು ತಿಳಿದು ಮುನ್ನಡೆಯಿರಿ. ಯಾಕೆಂದರೆ ಮಳೆಯಿಂದ ಇಲ್ಲಿನ ಹೆಬ್ಬಾಳೆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ಚಿಕ್ಕಮಗಳೂರು : ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗೋ ಪ್ರವಾಸಿಗರೇ ಎಚ್ಚರ. ಇಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮೂಡಿಗೆರೆಯ ಹೆಬ್ಬಾಳೆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.
ಭದ್ರಾ ನದಿಯ ರಭಸಕ್ಕೆ ಸೇತುವೆ ಮೇಲಿನ ಸಿಮೆಂಟ್ ಕಿತ್ತು ಹೋಗಿದ್ದು, ಸಿಮೆಂಟ್ ಕಿತ್ತು ಸೇತುವೆಯ ಕಬ್ಬಿಣದ ಸರಳುಗಳು ಕಾಣುತ್ತಿವೆ. ಸೇತುವೆಯ ಮಧ್ಯದಲ್ಲಿ ರಂಧ್ರಗಳಾಗಿವೆ. ಅಲ್ಲದೇ ಸೇತುವೆ ಅಲ್ಲಲ್ಲೇ ಬಿರುಕು ಬಿಟ್ಟಿದ್ದು, ತಡೆಗೋಡೆಯೂ ಕೂಡ ಇಲ್ಲದಂತಾಗಿದೆ.
ಈ ನಿಟ್ಟಿನಲ್ಲಿ ಇಲ್ಲಿಗೆ ತೆರಳುವ ಪ್ರವಾಸಿಗರು ಹಾಗೂ ಭಕ್ತರು ಎಚ್ಚರಿಕೆಯಿಂದ ಸಂಚರಿಸುವುದು ಒಳಿತು. ಆದಷ್ಟು ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಇಲ್ಲಿಗೆ ತೆರಳುವುದು ಒಳಿತಾಗಿದೆ.
