ಅವನೊಬ್ಬ ರಾಕ್​ ಸ್ಟಾರ್​, ಅವನೊಬ್ಬ ಆಕ್ಟರ್​, ಅವನೊಬ್ಬ ಆಧ್ಯಾತ್ಮ ಗುರು, ಅವನು ಒಬ್ಬನೇ ಆದ್ರೆ ಅವನ ಅವತಾರಗಳು ಅನೇಕ. ಹೀಗೆ ನಾನಾ ಅವತಾರಗಳನ್ನು ಎತ್ತಿ ಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಬಾಬಾನ ಹಿಂದೆ ಒಬ್ಬ ಮಹಿಳೆ ಇದ್ದಾಳೆ? ಯಾರು ಆ ಮಹಿಳೆ? ಯಾವಾಗಲೂ ಬಾಬಾನ ಹಿಂದೆ ಆ ಮಹಿಳೆ ಇರುತ್ತಾಳೆ? ಬಾಬಾಗೂ ಆ  ಮಹಿಳೆಗೂ ಏನು ಸಂಬಂಧ ಅಂತೀರಾ ಈ ವರದಿ ನೋಡಿ.

ಬೆಂಗಳೂರು(ಆ.28): ಸ್ವಯಂಘೋಷಿತ ದೇವ ಮಾನವ ರಾಮ್ ರಹೀಮ್ ಬಾಬಾ ರೇಪ್ ಮಾಡಿ ಜೈಲಿನಲ್ಲಿದ್ದಾನೆ. ಆದ್ರೆ ಈ ಬಾಬಾ ಅಂತಿಂಥ ವ್ಯಕ್ತಿಯಲ್ಲ. ಭಲೇ ಕಿಲಾಡಿ. ಈತ ಬಣ್ಣದ ಬದುಕಲ್ಲೂ ಮುಳಿಗೆದ್ದು ಬಂದವ. ಮೆಸೆಂಜರ್ ಆಫ್ ಗಾಡ್ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ ಕಲಾಕಾರ. ಇಂಥಾ ಕಲಾವಿದ ಜೊತೆಗಿನ ಒಬ್ಬ ಮಹಿಳೆ ಇದ್ದಾಳೆ.

ಬಾಬಾ ಜೊತೆಗಿರಬೇಕು ಚೆಲುವೆ

ಈ ಮಾತು ಸತ್ಯ. ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಮ್ ಬಾಬಾನ ಹಿಂದೆ ಸದಾಕಾಲ ಆ ಮಹಿಳೆ ಇರಲೇಬೇಕು. ಆ ಮಹಿಳೆ ಹೆಸರೇ ಹನಿಪ್ರೀತ್(Honeypreet). ಹರಿಯಾಣ ಮೂಲದ ಈ ಹನಿಪ್ರೀತ್. ಡೇರಾ ನಿವಾಸಿಯಾಗಿದ್ದು ಡಿಸೆಂಬರ್​ 2009ರಲ್ಲಿ. ಪ್ರಿಯಾಂಕ ಹೆಸರಿನ ಈಕೆ ಪತಿ ವಿಶ್ವಾಸ್​ ಜೊತೆ ಬಾಬಾನ ದರ್ಶನಕ್ಕೆ ಬಂದಿದ್ಲು. ಆದ್ರೆ ಅಲ್ಲಿ ಆಗಿದ್ದೇ ಬೇರೆ ಹನಿಪ್ರೀತ್ ಬಾಬಾನ ಮಾತಿಗೆ ಮರುಳಾಗಿ ಬಿಡ್ತಾಳೆ. ಮೊದಲ ಭೇಟಿಯಲ್ಲಿಯೇ ಪ್ರಿಯಾಂಕಗೆ ಹನಿಪ್ರೀತ್​ ಎಂದು ನಾಮಕರಣ ಮಾಡಿ ದತ್ತುಪುತ್ರಿ ಎಂದು ಸ್ವೀಕರಿಸುತ್ತಾನೆ ಈ ರೇಪಿಸ್ಟ್ ಬಾಬಾ.

ಅಂದಿನಿಂದ ಇಂದಿನವರೆಗೆ ಬಾಬಾ ಎಲ್ಲೆ ಹೋದ್ರೂ ಬಾಬಾ ಮತ್ತು ಹನಿಪ್ರೀತ್ ಜೊತೆಯಾಗಿ ಹೋಗ್ತಾಳೆ. ಬಾಬಾ ಎಲ್ಲೆ ಹೋಗಬೇಕಾದರೂ ಬಾಬಾ ಜೊತೆಗೆ ಹನಿಪ್ರೀತ್ ಇರಲೇ ಬೇಕಾಗಿತ್ತು. ಇದೇ ವಿಚಾರವಾಗಿ ಹನಿಪ್ರೀತ್​ ಪತಿ ವಿಶ್ವಾಸ ಮಧ್ಯ ಜಗಳವಾಗಿ ಕುಟುಂಬ ಬಿಟ್ಟು ಬಾಬಾನ ಆಶ್ರಮ ಸೇರಿದ್ದಳು ಈ ಹನಿಪ್ರೀತ್​.

ಮೇ 2011 ರಂದು ಹನಿಪ್ರೀತ್ ಪತಿ ವಿಶ್ವಾಸ್​ ಏಕಾಏಕಿ ಬಾಬಾನ ರೂಂಗೆ ನುಗ್ಗಿದ್ದ. ಈ ವೇಳೆ ಬಾಬಾ ಮತ್ತು ಹನಿಪ್ರೀತ್ ಮಧ್ಯ ಇರುವ ಸಂಬಂಧ ಬಯಲಾಗಿತ್ತು. ಯಾವಾಗ ಹನಿಪ್ರೀತ್ ಪತಿಗೆ ಬಾಬಾನ ವಿಷಯ ಗೊತ್ತಾಯಿತ್ತೋ, ಆಗ ಬಾಬಾನ ಕಡೆಯವರು ವಿಶ್ವಾಸ್​​ ಕುಟುಂಬಕ್ಕೆ ಧಮ್ಕಿ ಹಾಕುತ್ತಾರೆ. ಆಗ ವಿಶ್ವಾಸ್​​ ಕುಟುಂಬದವರು ಕೋರ್ಟ್​ ಮೊರೆ ಹೋಗುತ್ತಾರೆ. 2014ರಲ್ಲಿ ಬಾಬಾನ ಕಡೆಯವರು ಧಮ್ಕಿ ಹೆಚ್ಚಾಗಿದ್ದರಿಂದ ಡೇರಾ ಬಿಟ್ಟ ಆ ವಿಶ್ವಾಸ ಕುಟುಂಬ ಬೇರೆ ಕಡೆ ಪ್ರಯಾಣ ಮಾಡಿತ್ತು.

ಅಂದಿನಿಂದ ಇಂದಿನವರೆಗೂ ಬಾಬಾ ಮತ್ತು ಹನಿಪ್ರೀತ್ ಜೊತೆಯಾಗಿ ಎಲ್ಲಡೆ ಮಿಂಚಿದ್ರು. ಅಷ್ಟೇ ಅಲ್ಲದೆ ಇಬ್ಬರು ದಿ ವಾರಿಯರ್: ಲಯನ್ ಹಾರ್ಟ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥೆ ಆಗ್ತಾರಾ ಹನಿಪ್ರೀತ್​?

ಸ್ವಯಂಘೋಷಿತ ದೇವಮಾನವ ರಾಮ್ ರಹೀಮ್ ಬಾಬಾ ಜೈಲಿಗೆ ಹೋಗೋದು ಖಾಯಂ ಆಗಿದೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥೆಯಾಗಿ ಬಾಬಾರ ದತ್ತುಪುತ್ರಿ ಹನಿಪ್ರೀತ್ ಆಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.