ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಈಗಾಗಲೇ ಜೈಲು ಸೇರಿರುವ ಗುರ್ಮೀತ್ ಸಿಂಗ್ 'ದತ್ತು ಪುತ್ರಿ' ಬರೋಬ್ಬರಿ 38 ದಿನಗಳ ಬಳಿಕ ವಾಹಿನಿಯೊಂದರ ಮೂಲಕ ಕಾಣಿಸಿಕೊಂಡಿದ್ದಾಳೆ. ಬಾಬಾ ಜೈಲು ಸೇರಿದ ಬಳಿಕ ನಾಪತಯ್ತೆಯಾಗಿದ್ದ ಆಕೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು, ಈ ನಡುವೆ ಆಕೆ ದೆಹಲಿಯಲ್ಲಿದ್ದಾಳೆಂಬ ಮಾತುಗಳೂ ಕೇಳಿ ಬಂದಿದ್ದವು. ಅಲ್ಲದೇ ಬಾಬಾ ಹಾಗೂ ಆಕೆಯ ನಡುವೆ ಲೈಂಗಿಕ ಸಂಬಂಧವಿತ್ತು ಎಂಬ ಮಾತುಗಳು ಭಾರೀ ಸುದ್ದಿ ಮಾಡಿದ್ದವು. ಖುದ್ದು ಆಕೆಯ ಮಾಜಿ ಪತಿಯೇ ಈ ಕುರಿತಾಗಿ ಹೇಳಿಕೆ ನೀಡಿದ್ದು, ಈ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಆದರೀಗ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಹನಿಪ್ರೀತ್ ಬಾಬಾ ಜೈಲು ಸೇರಿದ ಬಳಿಕ ಮೊದಲ ಬಾರಿ ತಮ್ಮಿಬ್ಬರ ನಡುವಿನ ಸಂಬಂಧದ ಕುರಿತಾಗಿ ಬಾಯ್ಬಿಟ್ಟಿದ್ದಾಳೆ ಆದರೆ ಈ ಸಂದರ್ಶನದ ಬಳಿಕ ಮತ್ತೆ ಮಾಯವಾಗಿದ್ದಾಳೆ.
ನವದೆಹಲಿ(ಅ.03): ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಈಗಾಗಲೇ ಜೈಲು ಸೇರಿರುವ ಗುರ್ಮೀತ್ ಸಿಂಗ್ 'ದತ್ತು ಪುತ್ರಿ' ಬರೋಬ್ಬರಿ 38 ದಿನಗಳ ಬಳಿಕ ವಾಹಿನಿಯೊಂದರ ಮೂಲಕ ಕಾಣಿಸಿಕೊಂಡಿದ್ದಾಳೆ. ಬಾಬಾ ಜೈಲು ಸೇರಿದ ಬಳಿಕ ನಾಪತಯ್ತೆಯಾಗಿದ್ದ ಆಕೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು, ಈ ನಡುವೆ ಆಕೆ ದೆಹಲಿಯಲ್ಲಿದ್ದಾಳೆಂಬ ಮಾತುಗಳೂ ಕೇಳಿ ಬಂದಿದ್ದವು. ಅಲ್ಲದೇ ಬಾಬಾ ಹಾಗೂ ಆಕೆಯ ನಡುವೆ ಲೈಂಗಿಕ ಸಂಬಂಧವಿತ್ತು ಎಂಬ ಮಾತುಗಳು ಭಾರೀ ಸುದ್ದಿ ಮಾಡಿದ್ದವು. ಖುದ್ದು ಆಕೆಯ ಮಾಜಿ ಪತಿಯೇ ಈ ಕುರಿತಾಗಿ ಹೇಳಿಕೆ ನೀಡಿದ್ದು, ಈ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಆದರೀಗ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಹನಿಪ್ರೀತ್ ಬಾಬಾ ಜೈಲು ಸೇರಿದ ಬಳಿಕ ಮೊದಲ ಬಾರಿ ತಮ್ಮಿಬ್ಬರ ನಡುವಿನ ಸಂಬಂಧದ ಕುರಿತಾಗಿ ಬಾಯ್ಬಿಟ್ಟಿದ್ದಾಳೆ ಆದರೆ ಈ ಸಂದರ್ಶನದ ಬಳಿಕ ಮತ್ತೆ ಮಾಯವಾಗಿದ್ದಾಳೆ.
ತನ್ನ ಮೆಲೆ ಕೇಳಿ ಬರುತ್ತಿರುವ ಆರೋಪ, ತನ್ನ ಹಾಗೂ ಬಾಬಾ ನಡುವಿನ ಸಂಬಂಧದ ಕುರಿತಾಗಿ ಹಬ್ಬಿರುವ ಸುದ್ದಿಯನ್ನು ನೇರವಾಗಿ ಖಂಡಿಸಿದ್ದಾರೆ.ಅಲ್ಲದೇ ತಾನು ಅತ್ಯಂತ ಪವಿತ್ರಳು ಎಂದಿದ್ದಾಳೆ. ಆದರೆ ತನ್ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಮಾಡಿರುವ ಆರೋಪದ ಕುರಿತಾಗಿ ಮಾತನಾಡಲು ನಿರಾಕರಿಸಿರುವ ಹನಿಪ್ರೀತ್ ತನ್ನ ಹಾಗೂ ಗುರ್ಮೀತ್ ಸಿಂಗ್ ನಡುವೆ ಕೇವಲ ತಂದೆ ಮಗಳ ಸಂಬಂಧವಿದೆ. ಓರ್ವ ತಂದೆ ತನ್ನ ಮಗಳನ್ನು ಪ್ರೀತಿಸಬಾರದಾ? ಆತ ಪ್ರೀತಿಯಿಂದ ಮಗಳನ್ನು ಮುಟ್ಟುವುದು ತಪ್ಪಾ?' ಎಂದಿದ್ದಾರೆ. ಹೀಗಿದ್ದರೂ ಮಾಜಿ ಪತಿ ವಿಶ್ವಾಸ್ ಗುಪ್ತಾ 'ಇಬ್ಬರ ನಡುವೆ ಅಕ್ರಮ ಸಂಬಂಧವಿದೆ, ತಾನೇ ಖುದ್ದಾಗಿ ಇವರಿಬ್ಬರು ಬೆಡ್ ರೂಂನಲ್ಲಿ ರತಿಕ್ರೀಡೆ ನಡೆಸುತ್ತಿರುವುದನ್ನು ನಾನೇ ಕಂಡಿದ್ದೇನೆ' ಎಂದು ಗಂಭೀರವಾಗಿ ಮಾಡಿರುವ ಆರೋಪವನ್ನು ಮರೆಯುವಂತಿಲ್ಲ.
'ರಾಮ್ ರಹೀಂ ನನ್ನ ತಂದೆ. ನಮ್ಮಿಬ್ಬರ ನಡುವೆ ಯಾವುದೇ ಕೆಟ್ಟ ಸಂಬಂಧವಿರಲಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ನೋಡಿ ನನಗೇ ಭಯವಾಗಿದೆ. ಅಲ್ಲಿ ತೋರಿಸಿರುವ ಹನಿಪ್ರೀತ್ ಹಾಗಿಲ್ಲ. ಇಂತಹ ಆರೋಪ ಕೇಳಿ ನಾನು ಖಿನ್ನತೆಗೊಳಗಾಗಿದ್ದೇನೆ. ಹೀಗಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇನೆ, ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ. ನನಗೆ ನ್ಯಾಯ ಸಿಗುತ್ತದೆ. ತಂದೆ ಮಗಳ ಸಂಬಂಧವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಓರ್ವ ತಂದೆ ತನ್ನ ಮಗಳನ್ನು ಪ್ರೀತಿಸಬಾರದಾ? ಆತ ಪ್ರೀತಿಯಿಂದ ಮಗಳನ್ನು ಮುಟ್ಟುವುದು ತಪ್ಪಾ?' ಎಂದು ಪ್ರಶ್ನಿಸಿದ್ದಾಳೆ'
ಸಂದರ್ಶನದ ಬಳಿಕ ಒಟ್ಟಾರೆಯಾಗಿ ಇಲ್ಲಿ ಹನಿಪ್ರೀತ್ ಹೇಳುವುದು ನಿಜವೋ ಅಥವಾ ಆಕೆಯ ಮಾಜಿ ಪತಿ ವಿಶ್ವಾಸ್ ಗುಪ್ತಾ ಮಾಡುತ್ತಿರುವ ರೋಪ ನಿಜವೇ ಎಂಬುವುದು ಕಾಲವೇ ನಿರ್ಧರಿಸಲಿದೆ.
