ಮೃತದೇಹ ಹೊತ್ತುಕೊಂಡು ಬಂದಿದ್ದವರು, ಮೃತದೇಹವನ್ನು ಅಲ್ಲೇ ಬಿಟ್ಟು ಜೇನುನೊಣಗಳ ದಾಳಿಯಿಂದ ತಪ್ಪಿಸಿ ಕೊಳ್ಳಲು ಕೊಂಚ ಕಾಲ ಬಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆಯುಂಟಾಯಿತು.

ಮೃತರ ಅಂತ್ಯ ಸಂಸ್ಕಾರ ನಡೆಸುವಾಗ ಬಂಧುಗಳು ಸಾಮಾನ್ಯವಾಗಿ ದುಃಖದಲ್ಲಿರುತ್ತಾರೆ. ಇಲ್ಲೊಂದು ಘಟನೆಯಲ್ಲಿ ಅಂತಹ ದುಃಖವನ್ನು ಇನ್ನಷ್ಟು ಇಮ್ಮಡಿಗೊಳಿಸುವ ಘಟನೆಗೆ ಜೇನು ನೊಣಗಳು ಕಾರಣ ವಾಗಿವೆ. ಮದುರೈನ ತಿರುಮಂಗಳಂ ವ್ಯಾಪ್ತಿಯಲ್ಲಿ 80ರ ಹರೆಯದ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರ ಅಂತ್ಯ ಸಂಸ್ಕಾರಕ್ಕೆಂದು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗಿದ್ದ ಸಂದರ್ಭ ಏಕಾಏಕಿ ಜೇನುನೊಣಗಳ ದಾಳಿ ನಡೆದಿದೆ. ಮೃತದೇಹ ಹೊತ್ತುಕೊಂಡು ಬಂದಿದ್ದವರು, ಮೃತದೇಹವನ್ನು ಅಲ್ಲೇ ಬಿಟ್ಟು ಜೇನುನೊಣಗಳ ದಾಳಿಯಿಂದ ತಪ್ಪಿಸಿ ಕೊಳ್ಳಲು ಕೊಂಚ ಕಾಲ ಬಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆಯುಂಟಾಯಿತು.