ಯಶ್ ಅಭಿನಯದ ‘ಟಾಕ್ಸಿಕ್’ ಟ್ರೇಲರ್ ಬಳಿಕ ಹೊಸ ಥಿಯರಿಗಳು ಹರಿದಾಡುತ್ತಿವೆ. ರಾಯ, ನಾದಿಯಾ ಮತ್ತು ಟಿಕೆಟ್ ಪಾತ್ರಗಳ ನಡುವೆ ಏನು ಸಂಬಂಧ? ‘ವಿಜಯ ವಿಕ್ರಮ’ ಹಾಗೂ ‘ಬಭ್ರುವಾಹನ’ ಜೊತೆ ಹೋಲಿಕೆ ಯಾಕೆ?
- Home
- News
- State
- Karnataka News Live: ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ
Karnataka News Live: ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ

ಬೆಂಗಳೂರು: ಕರ್ನಾಟಕ ಬಂದ್ಗೆ ನಾನು ಬದ್ಧವಾಗಿದ್ದೇನೆ, ಭದ್ರವಾಗಿದ್ದೇನೆ. ಇವತ್ತು ಬಂದ್ ಬೇಡ ಎನ್ನುವವರು ಅವತ್ತೇಕೆ ಒಪ್ಪಿಕೊಂಡರು. ಬಂದ್ಗೆ ಬೆಂಬಲವಿಲ್ಲ ಎನ್ನುವವರು ನನಗೆ ಕೈಕೊಟ್ಟಿದ್ದಾರೆಂದು ಹೇಳುವುದಿಲ್ಲ. ಅವರಿಗವರೇ ಕೈಕೊಟ್ಟಿದ್ದಾರೆ ಎಂದು ಎಂದು ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಹೇಳಿಕೆಗೆ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಕರ್ನಾಟಕ ಬಂದ್ಗೆ ವಿದ್ಯಾರ್ಥಿಗಳು, ಯುವಕರೇ ಶಕ್ತಿ. ಅವರೆಲ್ಲರೂ ಒಗ್ಗಟ್ಟಿನಿಂದ ಬಂದ್ಗೆ ಬೆಂಬಲ ಕೊಡಬೇಕು. ವಿದ್ಯಾರ್ಥಿಗಳು ಬಂದ್ನಲ್ಲಿ ಭಾಗವಹಿಸಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಜೆ ಕೊಡಬೇಕು. ಈ ಬಂದ್ ಕೇವಲ ಕಾವೇರಿ ನೀರನ್ನು ಮಾತ್ರ ಒಳಗೊಂಡಿಲ್ಲ. ಮಹದಾಯಿ, ಕಾವೇರಿ, ಕಳಸಾ- ಬಂಡೂರಿ, ಮೇಕೆದಾಟು ಅಣೆಕಟ್ಟು ಸೇರಿದಂತೆ ನಾಡಿನ ನೆಲ- ಜಲ, ಭಾಷೆ- ಗಡಿ ಸೇರಿದಂತೆ ಎಲ್ಲಾ ವಿಷಯಗಳೆಲ್ಲವನ್ನೂ ಒಳಗೊಂಡು ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಮಗ್ರ ಕರ್ನಾಟಕದ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ. ಇದನ್ನು ಕಂಡೂ ಬೆಂಬಲ ಕೊಡುವುದಿಲ್ಲ ಎಂದರೆ ಬೇಡ ಬಿಡಿ. ಈ ರಾಜ್ಯ ಏನು ಅವರ ಕೈಯ್ಯಲ್ಲಿದೆಯೇ. ಜನರು ಅವರು ಹೇಳಿದಂತೆ ಕೇಳುವರೇ. ಜನರು ನಮ್ಮ ಜೊತೆಗಿದ್ದರೆ ಅಷ್ಟೇ ಸಾಕು ಎಂದರು. ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಸೌಭಾಗ್ಯ ಇತರರು ಭಾಗವಹಿಸಿದ್ದರು.
Karnataka News Live 13 August 2026 ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ
Karnataka News Live 13 August 2026 ಸಿನಿಮಾಗೆ 50 ಕೋಟಿ ಬೇಕು ಅಂತಾ ಕೇಳಿದ್ರಂತೆ. 'ಇಲ್ಲ ಸರ್ ಅದಕ್ಕಿಂತ ಹೆಚ್ಚು' ಯಶ್ ಖಡಕ್ ಉತ್ತರ ಕೇಳಿ ಬಾಲಿವುಡ್ ಶಾಕ್!
'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಟ ಯಶ್, ಇದೀಗ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ. ಶೋನಲ್ಲಿ ಪತ್ರಕರ್ತ ರಜತ್ ಶರ್ಮಾ ಅವರ ಸವಾಲಿನ ಪ್ರಶ್ನೆಗಳಿಗೆ ಯಶ್ ತಮ್ಮದೇ ಖದರ್‌ನಲ್ಲಿ ಉತ್ತರಿಸಿದ್ದಾರೆ.
Karnataka News Live 13 August 2026 Zameer Ahmed - ಖಾತೆ ಹಂಚಿಕೆ ಬೆನ್ನಲ್ಲೇ ಬಿಗ್ ಟ್ವಿಸ್ಟ್! ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೂ ಹೋಗಲ್ಲ ಎಂದ ಜಮೀರ್; ಕೊಟ್ಟ ಕಾರಣವೇನು?
ಸಚಿವ ಜಮೀರ್ ಅಹಮದ್ ಖಾನ್ ಅವರು ತಮಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡದಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಆಗಸ್ಟ್ 15ರ ಧ್ವಜಾರೋಹಣ ಕಾರ್ಯಕ್ರಮದಿಂದಲೂ ವಿನಾಯಿತಿ ಕೋರಿದ್ದಾರೆ. ಕಾರಣವೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
Karnataka News Live 13 August 2026 ಅಮೆರಿಕಾ ಅಮೆರಿಕಾ 2 ಸ್ತ್ರೀಕೇಂದ್ರಿತ ಸಿನಿಮಾ - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು?
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ. ಸ್ತ್ರೀಕೇಂದ್ರಿತ ಕಥೆ ಮತ್ತು ಸಿನಿಮಾದ ಗಂಭೀರ ವಿಚಾರದ ಬಗ್ಗೆ ನಿರ್ದೇಶಕರು ಹೇಳಿದ್ದೇನು?
Karnataka News Live 13 August 2026 ಅಫ್ಘಾನಿಸ್ತಾನ-ಭಾರತ ಟೆಸ್ಟ್ ಸರಣಿಗೆ ಗಣೇಶ ಚತುರ್ಥಿ ಟ್ವಿಸ್ಟ್; ಬಿಸಿಸಿಐಗೆ ದಿನಾಂಕ ಬದಲಿಸುವಂತೆ ಅಫ್ಘಾನ್ ಪಟ್ಟು!
Karnataka News Live 13 August 2026 ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಯಾವಾಗ? ರವಿಚಂದ್ರನ್ ಸಹೋದರ ಬಾಲಾಜಿ ಕೊಟ್ಟ ಸ್ಪಷ್ಟನೆಯೇನು?
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ.
Karnataka News Live 13 August 2026 ಈ ಸಿನಿಮಾಗಳನ್ನು ನೋಡಿದ್ರೆ ದೇಶಭಕ್ತಿ ರಕ್ತದಲ್ಲಿ ಕುದಿಯುತ್ತೆ - ಕನ್ನಡದ ಎವರ್‌ಗ್ರೀನ್ ಚಿತ್ರಗಳಿವು
ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಮತ್ತು ಸೈನಿಕರ ತ್ಯಾಗವನ್ನು ಕಟ್ಟಿಕೊಟ್ಟ ‘ಕಿತ್ತೂರು ಚೆನ್ನಮ್ಮ’, ‘ಮುತ್ತಿನ ಹಾರ’, ‘ವೀರಪ್ಪ ನಾಯ್ಕ’, ‘ಸಂಗೊಳ್ಳಿ ರಾಯಣ್ಣ’ ಸೇರಿದಂತೆ ಪ್ರಮುಖ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.
Karnataka News Live 13 August 2026 KSP - ಮರು ಪರೀಕ್ಷೆಯೋ? ಕಾಯಂ ನಿರ್ಧಾರವೋ? ಪೊಲೀಸ್ ಅಭ್ಯರ್ಥಿಗಳಿಗೆ ಬಿಗ್ ಟ್ವಿಸ್ಟ್! ಖಾಕಿ ಕನಸಿನ ಹಾದಿಯಲ್ಲಿ ಕಣ್ಣೀರು!
ಆಗಸ್ಟ್ 2ರಂದು ನಡೆದ ಪೊಲೀಸ್ ಸಿವಿಲ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬ ಮತ್ತು ಸೀರಿಯಲ್ ನಂಬರ್ ಗೊಂದಲದಂತಹ ಭಾರಿ ಲೋಪಗಳು ಉಂಟಾಗಿದ್ದವು. ಇಲಾಖೆ ನೀಡಿರುವ ಈ ಟ್ವಿಸ್ಟ್‌ಗೆ ಸರ್ಕಾರ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 13 August 2026 ಅಕ್ಟೋಬರ್‌ನಿಂದ ಬೆಂಗಳೂರಿನ ಔಟರ್ ರಿಂಗ್ ರೋಡ್ ವೈಟ್ ಟ್ಯಾಪಿಂಗ್, ಟೆಕ್ಕಿಗಳಿಗೆ WFH ನೀಡುವಂತೆ ಸರ್ಕಾರ ಸಲಹೆ
ಬೆಂಗಳೂರಿನ ಹೊರವರ್ತುಲ ರಸ್ತೆಯ (ORR) ವೈಟ್‌ಟಾಪಿಂಗ್ ಕಾಮಗಾರಿಯನ್ನು ಶೀಘ್ರಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಕಾಮಗಾರಿ ವೇಳೆ ಟ್ರಾಫಿಕ್ ದಟ್ಟಣೆ ತಡೆಯಲು, ಐಟಿ-ಬಿಟಿ ಕಂಪನಿಗಳಿಗೆ 50% ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' ನೀಡಲು ಮಾತುಕತೆ ನಡೆಸಲು ಆದೇಶಿಸಲಾಗಿದೆ.
Karnataka News Live 13 August 2026 Goosebumps - ಥಟ್ಟಂತ ಮೈ ಜುಮ್ ಅನ್ನುತ್ತಾ? ಆ ಕ್ಷಣ ನಿಮ್ಮ ದೇಹದೊಳಗೆ ಏನಾಗುತ್ತೆ ಗೊತ್ತಾ?
ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್‌ನಲ್ಲಿ "Goosebumps" ಅಂತ ಕರೆಯುತ್ತಾರೆ.
Karnataka News Live 13 August 2026 Police - ಲಂಚದ ಹಣ ಕೈಸೇರುತ್ತಿದ್ದಂತೆ ರೇಡ್; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮಂಜುನಾಥ್!
ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರ ದೂರಿನ ಮೇರೆಗೆ ಪಕ್ಕಾ ಪ್ಲಾನ್ ಮಾಡಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದ ಸಮೇತ ಅಧಿಕಾರಿಯನ್ನು ರೆಡ್-ಹ್ಯಾಂಡಾಗಿ ಬಂಧಿಸಿದ್ದಾರೆ.
Karnataka News Live 13 August 2026 ವಿಮಾನದ ಕಿಟಕಿಗಳು ದುಂಡಾಗಿರುವುದೇಕೆ? ಇದರ ಹಿಂದಿದೆ ದೊಡ್ಡ ಸುರಕ್ಷತಾ ರಹಸ್ಯ!
ವಿಮಾನದಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡಲು ಕಿಟಕಿಯತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಆದರೆ ವಿಮಾನದ ಕಿಟಕಿಗಳು ಚೌಕಾಕಾರದಲ್ಲಿರದೆ ದುಂಡಾದ ಅಂಚುಗಳನ್ನು ಹೊಂದಿರುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ?
Karnataka News Live 13 August 2026 ಹದಗೆಟ್ಟ ರಸ್ತೆಗೆ ಬಲಿಯಾಯ್ತು ಮಹಿಳೆಯ ಪ್ರಾಣ, ಒಂದು ವಾರದಲ್ಲಿ 'ದುರಂತನಗರ' ರೋಡ್ ಸರಿಪಡಿಸುವ ಭರವಸೆ ಕೊಟ್ಟ ಅಧಿಕಾರಿಗಳು!
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಯುವತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
Karnataka News Live 13 August 2026 Yash - ಇನ್ನೂ ಸಿನಿಮಾ ತೆರೆಕಂಡಿಲ್ಲ, ಆಗಲೇ ‘ಟಾಕ್ಸಿಕ್’ಗೆ ಭರ್ಜರಿ ಡಿಮ್ಯಾಂಡ್! ಎಲ್ಲೆಲ್ಲೂ ಕನ್ನಡಿಗನದ್ದೇ ಹವಾ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ, ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಬುಕಿಂಗ್ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka News Live 13 August 2026 Actor - ಸ್ಯಾಂಡಲ್ವುಡ್ ನಟಿ ತಂಗಿ ವಿರುದ್ಧ 'ಲವ್, ಸೆ*, ಧೋಖಾ' ಆರೋಪ! 15 ಲಕ್ಷ ಕಳೆದುಕೊಂಡು ಜೈಲು ಪಾಲಾದ ಪ್ರಿಯಕರ!
Karnataka News Live 13 August 2026 ‘ಟಾಕ್ಸಿಕ್’ ನಟಿಯರ ನಡುವೆ ಕೋಲ್ಡ್‌ವಾರ್? ಸಿದ್ಧಾರ್ಥ್ ಹಳೆ ಲವ್‌ಸ್ಟೋರಿಯಿಂದ ಶುರುವಾಯ್ತಾ ಮುನಿಸು?
ಸಿದ್ದಾರ್ಥ್ ಮಲ್ಹೋತ್ರಾ ಜೊತೆಗಿನ ಹಳೆ ಸಂಬಂಧದ ಕಾರಣಕ್ಕೆ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನಡುವೆ ಎಲ್ಲವೂ ಸರಿ ಇಲ್ಲ ಅಂತೊಂದು ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ನಡುವೆ ಮುನಿಸು ಇದ್ಯಾ? ಇಂಟರ್‌ನೆಟ್‌ನಲ್ಲಿ ಏನಿದು ಚರ್ಚೆ? ತಿಳಿಯಲು ಮುಂದೆ ಓದಿ.
Karnataka News Live 13 August 2026 ಕನ್ನಡದ ‘777 ಚಾರ್ಲಿ’ ನಿರ್ದೇಶಕರಿಗೆ ಬಾಲಿವುಡ್ ಬಾಗಿಲು ಓಪನ್ - ದೊಡ್ಡ ನಟರ ಜೊತೆ ಚರ್ಚೆ
ಕನ್ನಡದ ಹಿಟ್ ಸಿನಿಮಾ ‘777 ಚಾರ್ಲಿ’ ಮೂಲಕ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ಕಿರಣ್ ರಾಜ್ ಇದೀಗ ಬಾಲಿವುಡ್‌ನತ್ತ ಹೆಜ್ಜೆ ಇಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 2022ರಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಬಳಿಕ..
Karnataka News Live 13 August 2026 Bengaluru - ಮನೆ ತಲುಪಲು ಜಸ್ಟ್ 3KM ಬಾಕಿ, ಹದಗೆಟ್ಟ ರಸ್ತೆಗೆ ಬಲಿಯಾದ ಮಹಿಳೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ
ಕೇರಳ ಮೇಧಾ ಆಕರ್ಷ್ ಅವರು ಇಪಿಎಫ್ಒದಲ್ಲಿ ಉದ್ಯೋಗಿಯಾಗಿದ್ದು, ಅವರಿಗೆ ಮೂರು ವರ್ಷದ ಮಗು ಕೂಡ ಇತ್ತು. ಕಳಪೆ ರಸ್ತೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅವರ ನ್ಯಾಯಬೇಕು ಎಂದು ಸ್ಥಳೀಯರು ಪ್ರತಿಘಟನೆ ನಡೆಸಿದ್ದಾರೆ.
Karnataka News Live 13 August 2026 ಮನುಷ್ಯರನ್ನು ಕಂಡಾಕ್ಷಣ ಬಾಣ ಹೂಡುವುದೇಕೆ? ಈ ದ್ವೀಪದೊಳಗೆ ಅಡಗಿದೆ ಅಪಾಯಕಾರಿ ರಹಸ್ಯ!
Sentinelese Tribe: ಆಧುನಿಕ ನಾಗರಿಕತೆಯ ಸಂಪರ್ಕವನ್ನೇ ಹೊಂದದೆ, ಹೊರ ಜಗತ್ತಿನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬದುಕುತ್ತಿರುವ ಕೆಲವು ಬುಡಕಟ್ಟು ಸಮುದಾಯಗಳು ಇಂದಿಗೂ ವಿಶ್ವದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ.
Karnataka News Live 13 August 2026 GBA - ಮೂರು ವರ್ಷಗಳ ಬಳಿಕ ಮತ್ತೆ ಆ ಯೋಜನೆ ಜಾರಿ? GBAಯಿಂದ ಬಂತು ಬಿಗ್ ಅಪ್ಡೇಟ್; ಗೌರಿ ಗಣೇಶ ಹಬ್ಬಕ್ಕೆ ಬರಲಿದೆ ಬಂಪರ್ ಗಿಪ್ಟ್?
ಮೂರು ವರ್ಷಗಳ ದೀರ್ಘ ವಿರಾಮದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಕಲ್ಯಾಣ ಯೋಜನೆಯನ್ನು ಪುನರಾರಂಭಿಸಿದೆ. ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆ ಯೋಜನೆ ಯಾವುದು ಗೊತ್ತಾ?