ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಸಾಮಾನ್ಯ ಕಾರಣಗಳು: ಮೂತ್ರದ ಸೋಂಕು, ಡಿ ಜೀವಸತ್ವದ ವಿಪರೀತ ಸೇವನೆ, ದೇಹದಲ್ಲಿ ಖನಿಜಗಳ ಅಸಮತೋಲನ, ಡಿಹೈಡ್ರೇಶನ್ ( ನಿರ್ಜಲೀಕರಣ), ಸಂಧಿವಾತ, ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾಡುವ ಡಯಟ್
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ರೋಗ ಎಂದರೆ ಮೂತ್ರಪಿಂಡದ ಕಲ್ಲು. ಈ ಮೂತ್ರ ಪಿಂಡದ ಕಲ್ಲಿನ ಕುರಿತು ಇಲ್ಲಿದೆ ನಿಮಗೊಂದಿಷ್ಟು ಮಾಹಿತಿ.
ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಸಾಮಾನ್ಯ ಕಾರಣಗಳು: ಮೂತ್ರದ ಸೋಂಕು, ಡಿ ಜೀವಸತ್ವದ ವಿಪರೀತ ಸೇವನೆ, ದೇಹದಲ್ಲಿ ಖನಿಜಗಳ ಅಸಮತೋಲನ, ಡಿಹೈಡ್ರೇಶನ್ ( ನಿರ್ಜಲೀಕರಣ), ಸಂಧಿವಾತ, ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾಡುವ ಡಯಟ್
ಮೂತ್ರಪಿಂಡದ ಕಲ್ಲುಗಳ ನಿವಾರಣೆಗಾಗಿ ಮನೆಮದ್ದು:
ತುಳಸಿ ಎಲೆಗಳು: 2-3 ತುಳಸಿ ಎಲೆಗಳ ಜೊತೆ 1 ಚಮಚ ಜೇನು ಸೇರಿಸಿ ರಸ ತೆಗೆದು ಪ್ರತಿ ದಿನ ಬೆಳಗ್ಗೆ ಸೇವನೆ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳು ನಿವಾರಣೆಯಾಗುತ್ತದೆ.
ಕಲ್ಲಂಗಡಿ ಹಣ್ಣು: ಕಲ್ಲಂಗಡಿಯಲ್ಲಿ ಇರುವ ಪೊಟ್ಯಾಷಿಯಂ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಹಣ್ಣನ್ನು ಸೇವಿಸದುವುದು ಅಥವಾ ಅದರ ರಸ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಾಶ ಮಾಡಬಹುದು.
ಅಂಜೂರದ ಹಣ್ಣುಗಳು: ಎರಡು ಅಂಜೂರದ ಹಣ್ಣುಗಳನ್ನು ಒಂದು ಲೋಟ ನೀರಿನೊಂದಿಗೆ ಹಾಕಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಾಶ ಮಾಡಬಹುದು.
ಟೊಮೆಟೋ ರಸ: ಉಪ್ಪು ಮತ್ತು ಚಿಟಕೆ ಮೆಣಸನ್ನು ಬೀಜ ತೆಗೆದ ಟೊಮೆಟೋ ರಸದ ಜೊತೆ ಬೆರೆಸಿ ಪ್ರತಿ ನಿತ್ಯ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಹೋಗಲಾಡಿಸಬಹುದು.
ನೀರು: ಪ್ರತಿನಿತ್ಯ ಹೆಚ್ಚು ನೀರನ್ನು ಸೇವಿಸಬೇಕು. ನೀರು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಪ್ಪಿಸುತ್ತದೆ.
ನಿಂಬೆ ರಸ: ಪ್ರತಿನಿತ್ಯ ದನ್ನು ಸೇವನೆ ಮಾಡುವುದರಿಂದ ಮೂತ್ರವಿಸರ್ಜನೆ ಸರಾಗವಾಗಿ ಆಗುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ತಪ್ಪುತ್ತದೆ.
ಆಹಾರ: ಸೇವಿಸುವ ಆಹಾರದಲ್ಲಿ ಹೆಚ್ಚು ಬೀಟ್ರೂಟ್, ಕ್ಯಾರೆಟ್, ಹೂಕೋಸು, ಬಾದಾಮಿ, ತೆಂಗಿನಕಾಯಿ, ಅವರೆಕಾಳು, ಇಂತಹ ಆಹಾರಗಳನ್ನು ಸೇವಿಸಿ.
