ಸಿಮಿ ನಿಷೇಧ ವಿಸ್ತರಣೆ: ರಾಜ್ಯಗಳ ಅಭಿಪ್ರಾಯ ಕೇಳಿದ ಕೇಂದ್ರ

Home Ministry seeks states' opinion over extension of ban on SIMI
Highlights

ನಿಷೇಧಿತ ಉಗ್ರಗ್ರಾಮಿ ಸಂಘಟನೆ ಸಿಮಿ ಮೇಲೆ ಈ ಹಿಂದೆ ಇದ್ದ ನಿಷೇಧವನ್ನು ವಿಸ್ತರಣೆ ಮಾಡುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಆದರೆ ಇದಕ್ಕೂ ಮುನ್ನ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸಿ ಈ ಕುರಿತು ನಿರ್ಣಯ ಕೈಗೊಳ್ಳಲು ಕೇಂದ್ರ ಮುಂದಾಗಿದೆ. 

ನವದೆಹಲಿ(ಜೂ.5): ನಿಷೇಧಿತ ಉಗ್ರ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ(ಸಿಮಿ) ಮೇಲೆ ಹೇರಿದ್ದ ನಿಷೇಧ ವಿಸ್ತರಣೆಗೆ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಅಭಿಪ್ರಾಯ ಕೇಳಿದೆ.

ಕಾನೂನು ಬಾಹಿರ ಕೃತ್ಯ ತಡೆ ಕಾಯ್ದೆ ಅಡಿ ಸಿಮಿ ಸಂಘಟನೆಯನ್ನು ನಿಷೇಧಿಸಲಾಗಿದ್ದು, ನಿಷೇಧ ಜನವರಿ 31, 2019ಕ್ಕೆ ಅಂತ್ಯಗೊಳ್ಳಲಿದೆ. ಕೇಂದ್ರ ಸರ್ಕಾರ ಮತ್ತೆ ನಿಷೇಧ ವಿಸ್ತರಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ರಾಜ್ಯಗಳ ಅಭಿಪ್ರಾಯ ಕೇಳಿದೆ.

ಒಂದು ವೇಳೆ ಸಿಮಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಪತ್ತೆಯಾದರೆ ಕೇಂದ್ರ ಸರ್ಕಾರ ಮತ್ತೆ ನಿಷೇಧ ಹೇರುವ ಸಾಧ್ಯತೆ ಇದೆ. ಆದರೆ ಇದಕ್ಕೂ ಮುನ್ನ ಈ ಸಂಘಟನೆಯ ಚಲನವಲನಗಳ ಕುರಿತು ರಾಜ್ಯವಾರು ಅಭಿಪ್ರಾಯ ಸಂಗ್ರಹಣೆ ಬಳಿಕವೇ ಮುಂದಡಿ ಇಡುವ ಕುರಿತು ಕೇಂದ್ರ  ಸರ್ಕಾರ ನಿರ್ಣಯ ಮಾಡಿದೆ ಎಂದು ಹೇಳಿದೆ.  
 

loader