ಮುಂಬಡ್ತಿ ಪಡೆದ ಪೊಲೀಸ್‌ ಸಿಬ್ಬಂದಿಗೆ ಅರಮನೆ ಮೈದಾನದಲ್ಲಿ ಸೋಮವಾರ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಡಿಸಿಪಿ ಹಂತದ ಅಧಿಕಾರಿಗಳು ಎಷ್ಟುಬೇಗ ಫೀಲ್ಡ್‌ಗೆ ಇಳಿಯುತ್ತಾರೋ ಅಷ್ಟೇ ಪರಿಣಾಮಕಾರಿಯಾಗಿ ಉಳಿದ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಟ್ಟರು.
ಬೆಂಗಳೂರು(ಜ.31): ನಗರ ಸಂಚಾರ ವಿಭಾಗದ ಪೊಲೀಸರು ಇನ್ಸ್ಪೆಕ್ಟರ್ ಆದಿಯಾಗಿ ಡಿಸಿಪಿವರೆಗೆ ಎಲ್ಲರೂ ಬೆಳಗ್ಗೆ ಫೀಲ್ಡ್ಗೆ ಇಳಿಯಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಅಂತವರನ್ನು ಸಂಚಾರ ವಿಭಾಗದಿಂದ ಬೇರೆಡೆಗೆ ನಿಯೋಜಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಮುಂಬಡ್ತಿ ಪಡೆದ ಪೊಲೀಸ್ ಸಿಬ್ಬಂದಿಗೆ ಅರಮನೆ ಮೈದಾನದಲ್ಲಿ ಸೋಮವಾರ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಡಿಸಿಪಿ ಹಂತದ ಅಧಿಕಾರಿಗಳು ಎಷ್ಟುಬೇಗ ಫೀಲ್ಡ್ಗೆ ಇಳಿಯುತ್ತಾರೋ ಅಷ್ಟೇ ಪರಿಣಾಮಕಾರಿಯಾಗಿ ಉಳಿದ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಟ್ಟರು.
ರಾಜ್ಯ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆಗೆ ಗುಜರಾತ್ನ ಪೊಲೀಸ್ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದ್ದೇನೆ. ಸಮಯ ಪ್ರಜ್ಞೆ, ಕಾರ್ಯ ಕ್ಷಮತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಅವರಿಗಿಂತ ನಮ್ಮ ಪೊಲೀಸರ ಸಾಧನೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
1882 ಸಿಬ್ಬಂದಿಗೆ ಮುಂಬಡ್ತಿ
ಸಮಾರಂಭದಲ್ಲಿ 152 ಮಂದಿ ಮಹಿಳಾ ಸಿಬ್ಬಂದಿ ಸೇರಿ ಒಟ್ಟು 1882 ಸಿಬ್ಬಂದಿಗೆ ಮುಂಬಡ್ತಿ ಪದವಿ ಪ್ರದಾನ ಮಾಡಲಾಯಿತು. ಪೇದೆಯಿಂದ ಮುಖ್ಯಪೇದೆ, ಮುಖ್ಯಪೇದೆಯಿಂದ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಮತ್ತು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮತ್ತಿತರರಿದ್ದರು.
