ಪೊಲೀಸ್ ಅಧಿಕಾರಿಗಾಳ ವರ್ಗಾವಣೆ ಎರಡು ವರ್ಷಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ. ಈಗ ಡಿವೈಎಸ್ಪಿ, ಸಿಪಿಐ, ಪಿಎಸೈ ವರ್ಗಾವಣೆ ಅವಧಿ ಒಂದು ವರ್ಷವಿದೆ. ಅದನ್ನು ಎರಡು ವರ್ಷಕ್ಕೆ ಮಾಡಿದ್ರೆ ಉತ್ತಮ ಕೆಲಸ ಮಾಡಬಹುದು.
ಬೆಳಗಾವಿ(ಅ.07): ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸದಿರುವ ಕಾರಣವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ದಾಬೋಲಕರ ಹತ್ಯೆಯಾಗಿ ನಾಲ್ಕು ವರ್ಷವಾಗಿದೆ. ಆದರೂ ತನಿಖೆ ನಡೆಸುತ್ತಿರುವ ಸಿಬಿಐ'ನವರು ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಿಎಂ ಅವರು ಗೌರಿ ಪ್ರಕರಣವನ್ನ ಎಸ.ಐ.ಟಿ ನೀಡಲಾಗಿದೆ. ಹಂತಕರನ್ನ ಬಂಧಿಸಲು ನೂರಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಹಂತಕರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆ 2 ವರ್ಷಕ್ಕೆ
ಪೊಲೀಸ್ ಅಧಿಕಾರಿಗಾಳ ವರ್ಗಾವಣೆ ಎರಡು ವರ್ಷಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ. ಈಗ ಡಿವೈಎಸ್ಪಿ, ಸಿಪಿಐ, ಪಿಎಸೈ ವರ್ಗಾವಣೆ ಅವಧಿ ಒಂದು ವರ್ಷವಿದೆ. ಅದನ್ನು ಎರಡು ವರ್ಷಕ್ಕೆ ಮಾಡಿದ್ರೆ ಉತ್ತಮ ಕೆಲಸ ಮಾಡಬಹುದು. ನನ್ನ ಅವಧಿಯಲ್ಲಿ ಎರಡು ವರ್ಷ ಮಾಡುವೇ ಎಂದು ತಿಳಿಸಿದರು.
ಮಾಜಿ ಸಿಎಂ'ಗೆ ಟಾಂಗ್
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನಿಡಿದ ಗೃಹಸಚಿವರು ಸರ್ಕಾರ ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿಲ್ಲ. ಜಗದೀಶ ಶಟ್ಟರ ವಿರೋಧ ಪಕ್ಷದ ನಾಯಕರು.ಎಸಿಬಿಯನ್ನು ಕೇಂದ್ರ ಐಟಿ ಅಧಿಕಾರಿಗಳ ವಿರುದ್ಧ ಬಳಸಿಕೊಳ್ಳಿತ್ತಿರುವ ಶೆಟ್ಟರ ಆರೋಪ ಊಹೆಯಾಗಿದೆ.ಶೆಟ್ಟರ್ ಅವರು ಊಹೆ ಮಾಡಿಕೊಂಡು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲ್ಲ.ಎಸಿಬಿ ಅವರಿಗೆ ಅಧಿಕಾರವಿದ್ದರೆ ತಮ್ಮ ಕೆಲಸ ಮಾಡೇ ಮಾಡ್ತಾರೆ. ನಮ್ಮ ಸರ್ಕಾರ ಎಸಿಬಿಯನ್ನ ರಾಜಕೀಯವಾಗಿ ಬಳಸಿಕೊಂಡಿಲ್ಲ ಎಂದು ಹೇಳಿದರು.
