ಉಪಚುನಾವಣೆ ಸೋಲಿಗೆ ರಾಜನಾಥ್ ಪ್ರತಿಕ್ರಿಯೆ ಹೀಗಿತ್ತು..!

Home Minister Rajnath Singh reacted to the BJP's loss in bypolls
Highlights

 ಉತ್ತರ ಪ್ರದೇಶದ ಕೈರಾನಾ ಸೇರಿದಂತೆ ನಾಲ್ಕು ಲೋಕಸಭಾ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ(ಮೇ 31): ಉತ್ತರ ಪ್ರದೇಶದ ಕೈರಾನಾ ಸೇರಿದಂತೆ ನಾಲ್ಕು ಲೋಕಸಭಾ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ದೊಡ್ಡ ಮಟ್ಟಕ್ಕೆ ಹಾರಲು ಎರಡು  ಹೆಜ್ಜೆ ಹಿಂದಕ್ಕೆ ಹೋಗಿದ್ದೇವೆ ಎಂದು ಮಾಮಿರ್ಮಿಕವಾಗಿ ಹೇಳಿರುವ ರಾಜನಾಥ್, ದೊಡ್ಡ ಮಟ್ಟದ ಸಾಧನೆ ಮಾಡಲು ಯಾವಾಗಲೂ ಎರಡು ಹಂತಗಳನ್ನು ಹಿಂದಕ್ಕೆ ಹೋಗಬೇಕಾಗುತ್ತದೆ ಎಂದು ಸಮರ್ಥನೆ ನೀಡಿದರು.
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ  ಸಾಧನೆಗಳನ್ನು ವಿವರಿಸಿದ ರಾಜನಾಥ್ ಸಿಂಗ್ ,ಮುಂಬರುವ  ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

loader