ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಅನ್ನೋ ಕುರಿತು ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಎಲ್ಲವನ್ನೂ ನಿಭಾಯಿಸೋದು ಕಷ್ಟವಾಗುತ್ತೆ. ಆದ್ರಿಂದ ಇಲಾಖೆ ಹೊಣೆಯನ್ನು ಸಮರ್ಥರಿಗೆ ನೀಡುವ ಇಂಗಿತವನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸ್ವಲ್ಪ ತಡವಾಗಿಯೇ ಬೆಳಕಿಗೆ ಬಂದಿದೆ.
ಬೆಂಗಳೂರು(ಜು.14): ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಇಲಾಖೆಯಯನ್ನ ಸಿದ್ರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಲ್ಲಿವರೆಗೂ ಇಲಾಖೆಯನ್ನ ಕೆಂಪಯ್ಯ ಮೂಲಕ ಹ್ಯಾಂಡಲ್ ಮಾಡಬಹುದು ಅನ್ನೋ ಭಾವನೆ ಸಿದ್ದರಾಮಯ್ಯ ಅವರಲ್ಲಿತ್ತು. ಅಲ್ಲದೇ, ಹಾಗೆಯೇ ಇಲಾಖೆಯನ್ನು ಮುನ್ನಡೆಸಿದ್ದರು. ಆದ್ರೆ ಇದೀಗ ಗೃಹ ಇಲಾಖೆ ಹೊಣೆಯಿಂದ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಅನ್ನೋ ಕುರಿತು ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಎಲ್ಲವನ್ನೂ ನಿಭಾಯಿಸೋದು ಕಷ್ಟವಾಗುತ್ತೆ. ಆದ್ರಿಂದ ಇಲಾಖೆ ಹೊಣೆಯನ್ನು ಸಮರ್ಥರಿಗೆ ನೀಡುವ ಇಂಗಿತವನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸ್ವಲ್ಪ ತಡವಾಗಿಯೇ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಗಲಭೆಗೂ ಮುನ್ನ ಗೃಹ ಖಾತೆಯನ್ನು ಸಿರೀಯಸ್ ಆಗಿ ತಗೊಂಡಿರಲಿಲ್ಲ ಸಿದ್ರಾಮಯ್ಯ. ಯಾವಾಗ ಗಲಭೆ ನಿಯಂತ್ರಿಸುವಲ್ಲಿ ಗೃಹ ಇಲಾಖೆ ವಿಫಲವಾಯಿತು ಅನ್ನೋ ಮಾತು ಕೇಳಿ ಬಂತೋ, ಅಲ್ಲಿಗೆ ಕಂಗಾಲಾದ ಸಿದ್ದರಾಮಯ್ಯ ಕೂಡಲೇ ಇಲಾಖೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಚಿಂತನೆ ನಡೆಸಿದರು. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ರಮೇಶ್ಕುಮಾರ್ ಈ ಹುದ್ದೆಗೆ ಸೂಕ್ತರಾಗಿದ್ದು, ಗಲಭೆಯಂತಹ ಸನ್ನಿವೇಶಗಳನ್ನ ಮತ್ತು ಬಿಜೆಪಿಯ ಹೋರಾಟಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ರಮೇಶ್ಕುಮಾರ ಇದಕ್ಕೆ ಸೂಕ್ತರು ಅನ್ನೋ ಮಾತನ್ನು ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ ಹಾಗೆಯೇ ಸಿದ್ರಾಯ್ಯರ ಸ್ಥಿತಿಯೂ ಹಾಗೆಯೇ ಆಗಿದೆ. ಕೆಲವೇ ದಿನಗಳಲ್ಲಿ ಗೃಹ ಇಲಾಖೆಯನ್ನು ಹಾಲಿ ಆರೋಗ್ಯ ಸಚಿವರಾಗಿರುವ ರಮೇಶ್ಕುಮಾರ ಅವ್ರಿಗೆ ವಹಿಸಲಾಗುವುದು ಅನ್ನೋ ಮಾತಂತೂ ಕೈ ಪಾಳಯದಲ್ಲಿ ಜೋರಾಗಿದೆ.
- ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್