ವಿಜಯಪುರ[ಜೂ. 09]  ಬಿಜೆಪಿ ಬರ ಅಧ್ಯಯನ ಕೇವಲ ನಾಟಕ. ಆಪರೇಷನ್ ಕಮಲ ವಿಫಲವಾಗಿದ್ದಕ್ಕೆ ಬಿಜೆಪಿ ಬರ ಪ್ರವಾಸ ಆರಂಭಿಸಿದೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಮುಂಗಾರು ಆರಂಭದಲ್ಲಿ ಬರ ಪ್ರವಾಸದ ನಾಟಕವಾಡ್ತಿದ್ದಾರೆ . ನಾಳೆ ಅಥವಾ ನಾಡಿದ್ದು ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ  ಇಂಥ ಸಮಯದಲ್ಲಿ ಬಿಜೆಪಿಯಿಂದ ಬರ ಅಧ್ಯಯನ ನಾಟಕ ನಡೆಯುತ್ತಿದೆ ಎಂದಿದ್ದಾರೆ.

ರಾಜೀವ್‌ ಗಾಂಧಿ, ದೇವೇಗೌಡರ ನಿರ್ಧಾರಗಳು ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ?

ರಾಜ್ಯದ 160ಕ್ಕೂ ಅಧಿಕ ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಬರ ಅಧ್ಯಯನ ವಿಚಾರ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ಮಾತ್ರ ರಾಜ್ಯದ ಜನರ ದುರ್ದೈವ ಅಲ್ಲದೇ ಮತ್ತಿನ್ನೇನು?