ನಕ್ಸಲ್ ಹಿಂಸಾಚಾರವನ್ನು ತಡೆಯಲು ರಾಜ್ಯ ಸರ್ಕಾರಗಳು ಇನ್ನಷ್ಟು ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ. ಇಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ರಾಜನಾಥ್ ಸಿಂಗ್, ಮಾವೋ ಹಿಂಸಾಚಾರವಾನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಂತೆ ಕರೆ ಕೊಟ್ಟಿದ್ದಾರೆ.

ನವದೆಹಲಿ (ಮೇ.08): ಮಾವೋವಾದಿ ಸಂಘಟನೆಗಳ ಹಣಕಾಸು ಮೂಲಗಳನ್ನು ಕತ್ತರಿಸಿ ಹಾಕುವಂತೆ ಗೃಹಮಂತ್ರಿ ರಾಜನಾಥ್ ಸಿಂಗ್ ನಕ್ಸಲ್-ಪೀಡಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಮಾವೋವಾದಿ ಹಿಂಸಾಚಾರವನ್ನು ತಡೆಗಟ್ಟಲು ಅದು ಬಹಳ ಪ್ರಮುಖವಾದ ಕ್ರಮವಾಗಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಕ್ಸಲ್ ಹಿಂಸಾಚಾರವನ್ನು ತಡೆಯಲು ರಾಜ್ಯ ಸರ್ಕಾರಗಳು ಇನ್ನಷ್ಟು ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ. ಇಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ರಾಜನಾಥ್ ಸಿಂಗ್, ಮಾವೋ ಹಿಂಸಾಚಾರವಾನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಂತೆ ಕರೆ ಕೊಟ್ಟಿದ್ದಾರೆ.

ಪ್ರತಿ ಬೆಟಾಲಿಯನ್ ಬಳಿ ಮಾನವ-ರಹಿತ ವೈಮಾನಿಕ ವಾಹನಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇರಬೇಕೆಂದು ಹೇಳಿರುವ ಅವರು, ಸಿಬ್ಬಂದಿಗೆ ಉತ್ತಮ ತರಬೇತಿಯ ಅಗತ್ಯದ ಬಗ್ಗೆ ಒತ್ತು ನೀಡಿದ್ದಾರೆ.