ಪ್ರಾಣ ಪಣಕ್ಕಿಟ್ಟು ರೈಲಿಗೆ ಸಿಲುಕುತ್ತಿದ್ದ ಮಗು ರಕ್ಷಿಸಿದ ಯೋಧ

Home Guard Saves Toddler From Being Run Over Train
Highlights

ಮಹಾರಾಷ್ಟ್ರ ಭದ್ರತಾ ಪಡೆಯ ಯೋಧರೋರ್ವರು  ತಮ್ಮ ಜೀವವನ್ನೇ ಪಣಕ್ಕಿಟ್ಟು ರೈಲು ಹಳಿಯ ಮೇಲೆ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ.  

ಮುಂಬೈ : ಮಹಾರಾಷ್ಟ್ರ ಭದ್ರತಾ ಪಡೆಯ ಯೋಧರೋರ್ವರು  ತಮ್ಮ ಜೀವವನ್ನೇ ಪಣಕ್ಕಿಟ್ಟು ರೈಲು ಹಳಿಯ ಮೇಲೆ ಬೀಳುತ್ತಿದ್ದ ಮಗುವನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ.  

ಮಹಾರಾಷ್ಟ್ರದ ಬೀವಂಡಿ ಪ್ರದೇಶದಲ್ಲಿ  ಮೊಹಮ್ಮದ್ ದಿಶಾನ್ ಅವರು ಪತ್ನಿ ಹಾಗೂ 5 ವರ್ಷದ ಮಗುವಿನೊಂದಿಗೆ ರೈಲಿಗಾಗಿ ಕಾಯುತ್ತಿದ್ದರು. 

ಈ ವೇಳೆ ರೈಲು ಆಗಮಿಸಿದ್ದು, ಅವಸರವಾಗಿ  ಮಗುವಿನ ಕೈ ಹಿಡಿದುಕೊಂಡು ಪೋಷಕರು ರೈಲು ಏರಲು ತೆರಳಿದ್ದಾರೆ. ಆದರೆ ಈ ವೇಳೆ ಮಗು ಪೋಷಕರ ಕೈಯಿಂದ ಜಾರಿ ಬಿದ್ದಿದೆ. ಇನ್ನೇನು ರೈಲಿನ ಅಡಿಗೆ ಮಗು ಬೀಳಬೇಕು ಎನ್ನುವಷ್ಟರಲ್ಲಿ ತಕ್ಷಣವೇ ಆಗಮಿಸಿದ ಯೋಧ ಸಚಿನ್ ಮಗುವನ್ನು ರಕ್ಷಣೆ ಮಾಡಿದ್ದಾರೆ. 

2- 3 ಸೆಕೆಂಡ್ ಗಳ ಅಂತರದಲ್ಲಿ ಸಂಭವಿಸಬಹುದಾದ ಅವಘಡವೊಂದನ್ನು ತಪ್ಪಿಸಿದ್ದಾರೆ.  ಆದರೆ ಈ ವೇಳೆ ಮಗು ಹಾಗೂ ಯೋಧಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

 

 

loader