ನವದೆಹಲಿ (ಅ. 04): ಇತ್ತೀಚೆಗಷ್ಟೇ ದೆಹಲಿಯ ಅಂಗಡಿಯೊಂದರಲ್ಲಿ ಸುಲಿಗೆ ಮಾಡಿ ಪರಾರಿಯಾಗಿದ್ದ ದರೋಡೆಕೋರನೋರ್ವ ಫೇಸ್ಬುಕ್‌ ಪೋಸ್ಟ್‌ನಿಂದ ಸಿಕ್ಕಿಬಿದ್ದಿದ್ದಾನೆ. ದೆಹಲಿ ಮೂಲದ ವ್ಯಕ್ತಿಯೋರ್ವನ ಅಂಗಡಿಗೆ ನುಗ್ಗಿದ ಮೂವರು ಖದೀಮರು ಗನ್‌ ತೋರಿಸಿ 27 ಸಾವಿರ ಕೋಟಿ ರು. ಸುಲಿಗೆ ಮಾಡಿ ಪರಾರಿಯಾಗಿದ್ದರು.

ದರೋಡೆ ಮಾಡಿದ ಹಣದಿಂದಲೇ ಶಿಮ್ಲಾ ಪ್ರವಾಸ ಕೈಗೊಂಡಿದ್ದ ಪ್ರಮುಖ ಆರೋಪಿ ಶುಭಂ, ಈ ಕುರಿತಾದ ಫೋಟೋಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದ. ಸುಲಿಗೆಯಲ್ಲಿ ಆತನ ಕೈವಾಡ ಅರಿತ ಪೊಲೀಸರಿಗೆ ಫೇಸ್‌ಬುಕ್‌ ಪೋಸ್ಟ್‌ನಿಂದಾಗಿ ಆತ ಶಿಮ್ಲಾದಲ್ಲಿರುವುದು ತಿಳಿಯಿತು. ಅಲ್ಲಿಗೆ ತೆರಳಿದ ತಂಡ ಶುಭಂನನ್ನು ದಿಲ್ಲಿಗೆ ಕರೆತಂದು ಡ್ರಿಲ್‌ ಮಾಡುತ್ತಿದೆ.