ಇಬ್ಬರು ಮಕ್ಕಳಿಗೆ ಪತ್ನಿ ಅಂಜನಾ ಹಾಗೂ ಮತ್ತೊಬ್ಬ ಸೊಸೆ ವೌಮಿತಾ ಶನಿವಾರ ರಾತ್ರಿ ಚುಚ್ಚುಮದ್ದು ನೀಡಿದ್ದಾರೆ, ಅವರು ಪ್ರಜ್ಞಾಹೀನರಾದ ನಂತರ ಎಲ್ಲರೂ ಮಾತ್ರೆ ಹಾಗೂ ಚುಚ್ಚುಮದ್ದನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ,’’
ರಾಂಚಿ(ಅ.13): ಸೊಸೆ ನೀಡಿದ ಕಿರುಕುಳ ತಾಳಲಾರದೇ ಸೇನಾ ವೈದ್ಯರೊಬ್ಬರ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ. ದೆಹಲಿಯ ನೋಯ್ಡಾದ 63 ವರ್ಷದ ಸೇನಾ ವೈದ ಸುಕಾಂತ ಸರ್ಕಾರ್ ಅವರ ಪತ್ನಿ ಅಂಜನಾ (60), ಮಗ ಸಮೀರ್, ಇಬ್ಬರು ಮೊಮ್ಮಕ್ಕಳು ಹಾಗೂ ಮತ್ತೊಬ್ಬ ಸೊಸೆ ಆತ್ಮಹತ್ಯೆ ಮಾಡಿಕೊಂಡವರು.
‘‘ಸೊಸೆ ವರದಕ್ಷಿಣೆ ಆರೋಪ ಹೊರಿಸಿ ಕಿರುಕುಳ ನೀಡುತ್ತಾ, ಬೆದರಿಕೆ ಒಡ್ಡುತ್ತಿದ್ದಳು. ಆಕೆಗೆ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಬೆಂಬಲ ನೀಡುತ್ತಿತ್ತು,’’ ಎಂದು ವೈದ್ಯ ಸರ್ಕಾರ್ ಆರೋಪಿಸಿದ್ದಾರೆ. ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸರ್ಕಾರ್ ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಲ್ಲಿ ಹಲವು ಆತ್ಮಹತ್ಯಾ ಪತ್ರಗಳು ಹಾಗೂ ಅಪಾರ್ಟ್‌ಮೆಂಟ್ ಪಕ್ಕದಲ್ಲಿ ಹಲವು ಚುಚ್ಚುಮದ್ದು ಹಾಗೂ ಮಾತ್ರೆಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಕ್ಕಳಿಗೆ ಪತ್ನಿ ಅಂಜನಾ ಹಾಗೂ ಮತ್ತೊಬ್ಬ ಸೊಸೆ ವೌಮಿತಾ ಶನಿವಾರ ರಾತ್ರಿ ಚುಚ್ಚುಮದ್ದು ನೀಡಿದ್ದಾರೆ, ಅವರು ಪ್ರಜ್ಞಾಹೀನರಾದ ನಂತರ ಎಲ್ಲರೂ ಮಾತ್ರೆ ಹಾಗೂ ಚುಚ್ಚುಮದ್ದನ್ನು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ,’’ ಎಂದು ಸುಕಾಂತ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾರೆ.
