ಪಟ್ಟಣದ ವಾರ್ಡ ನಂ5ರ ನಿವಾಸಿ ಬಸಪ್ಪ ತಳವಾರ ಮತ್ತು ಆತನ 6 ಜನ ಕುಟುಂಬಸ್ಥರು ಇದೀಗ ದಯಾಮರಣ ಕೋರಿ ಅರ್ಜಿ ಸಲ್ಲಿಸಿದವರು.

ಬಾಗಲಕೋಟೆ(ನ.16): ನಿಯಮ ಉಲ್ಲಂಘಿಸಿ ತಮ್ಮ ಮನೆಗೆ ಅಂಟಿಕೊಂಡೇ ಮನೆ ನಿರ್ಮಿಸುತ್ತಿರುವುದರ ವಿರುದ್ದ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಕುಟುಂಬವೊಂದು ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ ಬರೆದಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವಾರ್ಡ ನಂ5ರ ನಿವಾಸಿ ಬಸಪ್ಪ ತಳವಾರ ಮತ್ತು ಆತನ 6 ಜನ ಕುಟುಂಬಸ್ಥರು ಇದೀಗ ದಯಾಮರಣ ಕೋರಿ ಅರ್ಜಿ ಸಲ್ಲಿಸಿದವರು. ಬಸಪ್ಪ ತಳವಾರ ಕಳೆದ 30 ವರ್ಷಗಳಿಂದ ಅಲ್ಲಿ ವಾಸವಿದ್ದು, ಇದೀಗ ಅವರ ಪಕ್ಕದ ಜಾಗೆಯಲ್ಲಿ ಹೊಸಗೌಡ್ರ ಕುಟುಂಬಸ್ಥರು ಮನೆ ಕಟ್ಟುವ ವೇಳೆ ತಮ್ಮ ಮನೆಯ ಜಾಗೆಯಲ್ಲಿ ನಿಯಮ ಉಲ್ಲಂಘಿಸಿ ಮನೆ ಕಟ್ಟುತ್ತಿದ್ದು, ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ಆರೋಪಿಸಿ ಇದೀಗ ಕುಟುಂಬ ರಾಜ್ಯಪಾಲರಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದೆ.