ಭಾರತೀಯ ಮಹಿಳಾ ಹಾಕಿ ತಂಡದ ಭರವಸೆಯ ಆಟಗಾರ್ತಿ ಜ್ಯೋತಿ ಗುಪ್ತಾ ಮೃತದೇಹ ರೈಲು ಹಳಿಗಳ ಮೇಲೆ ಪತ್ತೆಯಾಗಿದೆ. ಭಾರತೀಯ ಮಹಿಳಾ ತಂಡದ ಸದಸ್ಯೆಯಾಗಿದ್ದ 20 ವರ್ಷ ಪ್ರಾಯದ ಜ್ಯೋತಿ ಗುಪ್ತಾ ಮೃತದೇಹ ನಿನ್ನೆ ರಾತ್ರಿ 8.30 ವೇಳೆ ರೆವಾರಿ ಸ್ಟೇಶನ್ ಬಳಿಯ ಜ್ಹಜ್ಜರ್ ಮೇಲ್ಸೇತುವೆ ಮೇಲೆ ಪತ್ತೆಯಾಗಿದೆ.
ಗುರುಗ್ರಾಮ್ / ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡದ ಭರವಸೆಯ ಆಟಗಾರ್ತಿ ಜ್ಯೋತಿ ಗುಪ್ತಾ ಮೃತದೇಹ ರೈಲು ಹಳಿಗಳ ಮೇಲೆ ಪತ್ತೆಯಾಗಿದೆ.
ಭಾರತೀಯ ಮಹಿಳಾ ತಂಡದ ಸದಸ್ಯೆಯಾಗಿದ್ದ 20 ವರ್ಷ ಪ್ರಾಯದ ಜ್ಯೋತಿ ಗುಪ್ತಾ ಮೃತದೇಹ ನಿನ್ನೆ ರಾತ್ರಿ 8.30 ವೇಳೆ ರೆವಾರಿ ಸ್ಟೇಶನ್ ಬಳಿಯ ಜ್ಹಜ್ಜರ್ ಮೇಲ್ಸೇತುವೆ ಮೇಲೆ ಪತ್ತೆಯಾಗಿದೆ.
ಓರ್ವ ಯುವತಿ ಅಚಾನಕ್ಕಾಗಿ ರೈಲಿನ ಮುಂದೆ ಬಂದಿದ್ದಾಳೆ. ಬ್ರೇಕ್ ಹಾಕಿ ರೈಲು ನಿಲ್ಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ, ಎಂದು ಚಂಡಿಗಢ-ಜೈಪುರ ಎಕ್ಸ್’ಪ್ರೆಸ್ ರೈಲಿನ ಚಾಲಕ ರೈಲ್ವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ.
ಬಳಿಕ ಸ್ಥಳಕ್ಕೆ ತೆರಳಿದ ರೈಲ್ವೇ ಪೊಲೀಸರಿಗೆ ಜ್ಯೋತಿ ಗುಪ್ತಾ ಮೃತ ದೇಹ ಪತ್ತೆಯಾಗಿದೆ.
ಬಸ್ಸು ವಿಳಂಬವಾಗಿರುವುದರಿಂದ ಮನೆಗೆ ಬರಲು ತಡವಾಗುತ್ತದೆ ಎಂದು ಜ್ಯೋತಿ ಸಂಜೆ 7ಕ್ಕೆ ತಾಯಿಗೆ ಕರೆ ಮಾಡಿ ಹೇಳಿದ್ದರು. ಆದರೆ 10.30 ವರೆಗೂ ಮನೆಗೆ ಬಾರದಿದ್ದಾಗ, ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ರೈಲ್ವೇ ಅಧಿಕಾರಿಗಳು ವಿಷಯವನ್ನು ತಿಳಿಸಿದ್ದಾರೆ.
(ಫೋಟೋ ಮೂಲ: ಹಾಕಿ ಇಂಡಿಯಾ)
