ಮೊಬೈಲ್ ಅಪ್ಲಿಕೇಶನ್’ಗೆ ಇಂದು ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇನ್ಮುಂದೆ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಸಿಏಪಿಎಫ್) ಸಿಬ್ಬಂದಿಗಳು ಒಂದೇ ಕ್ಲಿಕ್ಕಿನ ಮೂಲಕ ತನ್ನನ್ನು ತಲುಪಬಹುದೆಂದು ಹೇಳಿದ್ದಾರೆ.
ನವದೆಹಲಿ (ಮೇ.11): ಯೊಧರು ತಮ್ಮ ಅಹವಾಲನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅವರಿಗಾಗಿಯೇ ನೂತನ ಮೊಬೈಲ್ ಅಪ್ಲಿಕೇಶನನ್ನು ಬಿಡುಗಡೆ ಮಾಡಿದೆ.
ಮೊಬೈಲ್ ಅಪ್ಲಿಕೇಶನ್’ಗೆ ಇಂದು ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇನ್ಮುಂದೆ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಸಿಏಪಿಎಫ್) ಸಿಬ್ಬಂದಿಗಳು ಒಂದೇ ಕ್ಲಿಕ್ಕಿನ ಮೂಲಕ ತನ್ನನ್ನು ತಲುಪಬಹುದೆಂದು ಹೇಳಿದ್ದಾರೆ.
ಕಲ್ಲೇಟು ತಿಂದರೂ ಮತಯಂತ್ರಗಳನ್ನು ಸುರಕ್ಷಿತವಾಗಿ ಸಾಗಿಸಿದನ್ನು ನೆನಪಿಸಿಕೊಂಡ ರಾಜನಾಥ್ ಸಿಂಗ್, ಸಿಏಪಿಎಫ್ ಯೋಧರು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ, ಅವರ ಶಿಸ್ತು ಪ್ರಶಾಂಸಾರ್ಹವಾದುದ್ದು ಎಂದಿದ್ದಾರೆ.
ಇತ್ತೀಚೆಗೆ ಹುತಾತ್ಮ ಯೋಧರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಬಿಡುಗಡೆ ಮಾಡಲಾದ ‘ಭಾರತ್ ಕೆ ವೀರ್’ ಅಪ್ಲಿಕೇಶನ್’ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆಯೆಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದ್ಧಾರೆ.