Asianet Suvarna News Asianet Suvarna News

ಬಹುಮತವಿಲ್ಲದೆ ಸರ್ಕಾರ ರಚನೆಗೆ ಮುಂದಾದ BJP : ಎದುರಾಗುತ್ತಾ ಕಂಟಕ?

ಬಹುಮತವಿಲ್ಲದೇ ಸರ್ಕಾರ ರಚನೆಗೆ ಮುಂದಾದ ಬಿಜೆಪಿ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಕೇಳಿದ್ದಾರೆ. 

HK Patil questions governor Move To invite BS Yeddyurappa to form govt
Author
Bengaluru, First Published Jul 26, 2019, 4:10 PM IST

ಗದಗ [ಜು.26] : ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಇದೇ ವೇಳೆ ರಚನೆಗೆ ಅವಕಾಶ ನೀಡಿದ್ದ ರಾಜ್ಯಪಾಲರ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಗದಗದಲ್ಲಿ ಶಾಸಕ ಎಚ್ ಕೆ ಪಾಟೀಲ್ ಅಸಮಾಧಾನ ಹೊರಹಾಕಿದ್ದು, ರಾಜ್ಯಪಾಲರು ತಮ್ಮ ಕರ್ತವ್ಯಗಳನ್ನು ನಿಯಮಗಳ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ರಾಜಭವನ ದುರುಪಯೋಗ ಮಾಡಿಕೊಂಡು ಶಾ ಮತ್ತು ಯಡಿಯೂರಪ್ಪ ಬಹುಮತ ಇಲ್ಲದಿದ್ದರೂ ಸರಕಾರ ರಚನೆ ಮಾಡಲು ಮುಂದಾಗಿದ್ದಾರೆ ಮುಂದಾಗಿದ್ದಾರೆ ಎಂದರು. 

ರಾಜ್ಯ ರಾಜಕೀಯ ವಿಚಾರವಾಗಿ ಪ್ರಕರಣವೊಂದು ಇನ್ನೂ ಸುಪ್ರಿಂ ಕೋರ್ಟ್ ನಲ್ಲಿದೆ. ಇದರ ನಡುವಲ್ಲೇ ಬಹುಮತ ಸಾಬೀತು ಮಾಡಲು ಅವಕಾಶ ಹೇಗೆ ಕೊಟ್ಟರು ಎಂದು ಪ್ರಶ್ನೆ ಮಾಡಿದ್ದಾರೆ. 

ಸರ್ಕಾರ ರಚನೆ ಮಾಡಲು 111 ಸಂಖ್ಯಾಬಲ ಹೊಂದಿರುವುದು ಅವಶ್ಯಕ.  ಬೆಂಬಲದ ಅಂಕಿ ಸಾಬೀತು ಪಡಿಸದೇ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲು ಕೈಗೊಂಡ ನಿರ್ಧಾರ ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಪಾಟೀಲ್ ಹೇಳಿದರು. 

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?

ಸಂವಿಧಾನ ಉಲ್ಲಂಘನೆ ಮಾಡುವ ಈ ಕ್ರಮ ರಾಜ್ಯಪಾಲರಿಂದ ಆಗಿರುವುದು ಅತ್ಯಂತ ದುರ್ದೈವ ಮತ್ತು ಖಂಡನೀಯ. ಈ ರೀತಿ ಅಪಚಾರ ಮಾಡುವುದರಿಂದ ಬಿಜೆಪಿ ಜನರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ. ರಾಜ್ಯಪಾಲರು ತಮ್ಮ ನಿರ್ಧಾರದ ಬಗ್ಗೆ ವಿವರಣೆ ನೀಡಲಿ ಎಂದರು.

Follow Us:
Download App:
  • android
  • ios