Asianet Suvarna News Asianet Suvarna News

ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥನಿಂದ ಭೂಕಬಳಿಕೆ: ಹೀರೆಮಠ್ ಆರೋಪ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತೆಲಗಿ ಛಾಪಾ ಕಾಗದ ಹಗರಣದಲ್ಲಿಯೂ ಸಿದ್ಧಾರ್ಥ ಹೆಸರಿದೆ. ಡಾ.ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದಾಗ, ವೀರಪ್ಪನ್‌ಗೆ ಹಣ ಸಂದಾಯ ಮಾಡಲು ಸಿದ್ಧಾರ್ಥ ಮಧ್ಯವರ್ತಿಯಾಗಿದ್ದರು. ಎಸ್.ಎಮ್. ಕೃಷ್ಣ ಮತ್ತು ಸಿದ್ಧಾರ್ಥ ಸೇರಿ ಹಲವು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಎಸ್.ಎಮ್. ಕೃಷ್ಣ ಈಗ ಸಿದ್ಧಾರ್ಥ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

Hiremath Slams SM Krishna

ಹುಬ್ಬಳ್ಳಿ (ಮಾ.19): ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ  ಅವರ  ಅಳಿಯ‌ ಸಿದ್ದಾರ್ಥ  ಕೊಪ್ಪ ತಾಲೂಕಿನಲ್ಲಿ 180 ಎಕರೆ ಅರಣ್ಯ ಭೂಮಿಯನ್ನು ಕಬಳಿಸಿದ್ದಾರೆ, ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್. ಆರ್ ಹಿರೇಮಠ್ ಆರೋಪಿಸಿದ್ದಾರೆ.

ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ವತಿಯಿಂದ  ಸಿದ್ದಾರ್ಥ ವಿರುದ್ಧ ಅಕ್ರಮಗಳ ತನಿಖೆಗೆ ಆಗ್ರಹಿಸಿ ಹೈಕೋರ್ಟ್'ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ ಎಂದು ಹಿರೇಮಠ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತೆಲಗಿ ಛಾಪಾ ಕಾಗದ ಹಗರಣದಲ್ಲಿಯೂ ಸಿದ್ಧಾರ್ಥ ಹೆಸರಿದೆ. ಡಾ.ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದಾಗ, ವೀರಪ್ಪನ್‌ಗೆ ಹಣ ಸಂದಾಯ ಮಾಡಲು ಸಿದ್ಧಾರ್ಥ ಮಧ್ಯವರ್ತಿಯಾಗಿದ್ದರು. ಎಸ್.ಎಮ್. ಕೃಷ್ಣ ಮತ್ತು ಸಿದ್ಧಾರ್ಥ ಸೇರಿ ಹಲವು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಎಸ್.ಎಮ್. ಕೃಷ್ಣ ಈಗ ಸಿದ್ಧಾರ್ಥ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ಕಾಳಧನಿಕರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿಯವರು ಎಚ್ಚೆತ್ತುಕೊಳ್ಳಬೇಕು. ಎಸ್.ಎಮ್. ಕೃಷ್ಣ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಎಸ್.ಎಮ್. ಕೃಷ್ಣ ಅವರಿಗೆ ಸಂವಿಧಾನಾತ್ಮಕ ಉನ್ನತ ಹುದ್ದೆಗಳನ್ನು ಕೊಡಬಾರದು ಎಂದು ಹಿರೇಮಠ ಆಗ್ರಹಿಸಿದ್ದಾರೆ.

Follow Us:
Download App:
  • android
  • ios