ಹಿಂದೂಗಳ ಜನಸಂಖ್ಯೆ ವೃದ್ಧಿಗಾಗಿ ಹಿಂದೂಗಳು ಕನಿಷ್ಠ ೪ ಮಕ್ಕಳನ್ನು ಹೆರಬೇಕು ಎಂದು ಮಹಾರಾಷ್ಟ್ರದ ಶ್ರೀ ಗೋವಿಂದ ಗಿರಿ ಮಹಾರಾಜ್ ಹೇಳಿದ್ದಾರೆ.
ಉಡುಪಿ: ಹಿಂದೂಗಳ ಜನಸಂಖ್ಯೆ ವೃದ್ಧಿಗಾಗಿ ಹಿಂದೂಗಳು ಕನಿಷ್ಠ ೪ ಮಕ್ಕಳನ್ನು ಹೆರಬೇಕು ಎಂದು ಮಹಾರಾಷ್ಟ್ರದ ಶ್ರೀ ಗೋವಿಂದ ಗಿರಿ ಮಹಾರಾಜ್ ಹೇಳಿದ್ದಾರೆ.
ಧರ್ಮ ಸಂಸದ್‌ನ 2ನೇ ದಿನದ ಹಿಂದೂ ಸಾಮರಸ್ಯ-ಅಸ್ಪೃಶ್ಯತೆ ನಿವಾರಣೆ ಗೋಷ್ಠಿಯಲ್ಲಿ ತಮ್ಮ ವಿಚಾರವನ್ನು ಮಂಡಿಸಿದರು. ಸಮಾಜದಲ್ಲಿ ಸಾಮರಸ್ಯ ಮೂಡಬೇಕಾದರೆ ಸಮಾನತೆ ಸಾಧಿಸಬೇಕು, ಅದಕ್ಕೆ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಮಾನ ನಾಗರಿಕ ಸಂಹಿತೆ ಇಲ್ಲದೆ ಅಲ್ಪಸಂಖ್ಯಾತರಿಗೆ ಲಾಭವಾಗಿದೆ. ಹಿಂದುಗಳು ಅಲ್ಪಸಂಖ್ಯಾತರಾಗುವ ಆತಂಕ ಎದುರಾಗಿದೆ. ಆದ್ದರಿಂದ ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಎಂದವರು ತಮ್ಮ ವಾದವನ್ನು ಸಮರ್ಥಿಸಿಕೊಂಡರು.
