ಮುಂಬೈನಲ್ಲಿ ಇದೇ 14ನೇ ತಾರೀಖು ಪಾತಕಿ ದಾವೂದ್ ಇಬ್ರಾಹಿಂನ 3 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಿಂದು ಮಹಾಸಭಾ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ವಕೀಲರೊಬ್ಬ ರು ಆಸ್ತಿ ಖರೀದಿಗೆ ಮುಂದಾಗಿದ್ದಾರೆ.

ಮುಂಬೈ: ಮುಂಬೈನಲ್ಲಿ ಇದೇ 14ನೇ ತಾರೀಖು ಪಾತಕಿ ದಾವೂದ್ ಇಬ್ರಾಹಿಂನ 3 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಿಂದು ಮಹಾಸಭಾ ಸಂಘಟನೆ ಹಾಗೂ ಸುಪ್ರೀಂ ಕೋರ್ಟ್ ವಕೀಲರೊಬ್ಬ ರು ಆಸ್ತಿ ಖರೀದಿಗೆ ಮುಂದಾಗಿದ್ದಾರೆ.

ಮಂಗಳವಾರ ಬೆಳಗ್ಗೆ 2 ಗಂಟೆಗಳ ಕಾಲ ಈ ಆಸ್ತಿಯನ್ನು ವೀಕ್ಷಿಸಲು ಬಿಡ್‌ದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಈ ವೇಳೆ ಆಸ್ತಿ ಖರೀದಿ ಬಗ್ಗೆ ಉತ್ಸುಕತೆ ಹೊಂದಿರುವ ಹಿಂದು ಮಹಾಸಭಾದ ಡಾ| ಇಂದಿರಾ ತಿವಾರಿ ಪ್ರತಿಕ್ರಿಯೆ ನೀಡಿ, ‘ನಾವು ಈ ಆಸ್ತಿಗಳ ಖರೀದಿಯಲ್ಲಿ ಯಶಸ್ವಿಯಾದರೆ ಇಲ್ಲಿ ಮಕ್ಕಳ ಅನಾಥಾಶ್ರಮ ನಿರ್ಮಿಸಲಾಗುವುದು. ಬಡವರಿಗೆ ಆಶ್ರಯ ನೀಡಲಾಗುವುದು’ ಎಂದರು.

2015ಲ್ಲಿ ಹಿಂದು ಮಹಾಸಭೆಯು ದಾವೂದ್‌ನ ಕಾರು ಖರೀದಿಸಿ ಸುಟ್ಟು ಹಾಕಿತ್ತು. ಆತನಿಗೆ ಪಾಠ ಕಲಿಸುವ ಉದ್ದೇಶದಿಂದ ಹೀಗೆ ಮಾಡಿದ್ದೆವು ಎಂದು ಇಂದಿರಾ ಹೇಳಿದರು.