ನವದೆಹಲಿ  (ನ.29): ಯುಪಿಎಸ್'ಸಿ ಪರೀಕ್ಷೆಯ ಟಾಪರ್ ಟೀನಾ ಡಾಬಿ ತಾನು ಸೆಕೆಂಡ್ ರ್ಯಾಂಕ್ ಪಡೆದ ಅತರ್ ಅಮೀರ್ ಉಲ್ ಶಫಿಯನ್ನು ಮದುವೆಯಾಗುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸುತ್ತಿದ್ದಂತೆ ಅಖಿಲ ಭಾರತೀಯ ಹಿಂದೂ ಮಹಾಸಭಾ ವಿರೋಧಿಸಿದೆ. 

ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದು ಹೆಮ್ಮೆಯ ವಿಷಯವಾದರೆ ಅವರು ಮುಸ್ಲಿಂನನ್ನು ಮದುವೆಯಾಗುತ್ತಿರುವುದು ನೋವಿನ ಸಂಗತಿ ಎಂದು ಹೇಳಿದೆ.

ಸಮಾಜದ ಕೆಲವರಿಂದ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಟೀನಾ, ನಾವು ಪ್ರೀತಿಸುತ್ತಿದ್ದು ತುಂಬಾ ಸಂತೋಷವಾಗಿದ್ದೇವೆ. ಆದರೆ ಇಂತಹ ವಿರೋಧಗಳು ಕೇಳಿಬಂದಾಗ ತುಂಬಾ ನೋವಾಗುತ್ತದೆ ಎಂದಿದ್ದಾರೆ.