ಬುಲ್ದಾನಾ:(ಮೇ.31): ದೇಶದ ಕೋಮುಸೌಹಾರ್ದತೆ ತಳಮಟ್ಟದಲ್ಲಿ ಅದೆಷ್ಟು ಆಳವಾಗಿ ಬೇರೂರಿದೆ ಎಂದರೆ, ಯಾರಿಂದಲೂ ಈ ಸೌಹಾರ್ದತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಈ ದೇಶದಲ್ಲಿ ತನ್ನದೇ ಆದ ಇತಿಹಾಸವಿದೆ.

ಅದರಂತೆ ಮಹಾರಾಷ್ಟ್ರದ ಬುಲ್ದಾನಾ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಅನಾರೋಗ್ಯಪೀಡಿತ ಚಾಲಕನಿಗಾಗಿ ನಿತ್ಯವೂ ರಂಜಾನ್ ಉಪವಾಸ ಕೈಗೊಂಡು ಭಾವೈಕ್ಯತೆಯ ಮತ್ತೊಂದು ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.

ಬುಲ್ದಾನಾ ಅರಣ್ಯ ಅಧಿಕಾರಿ ಸಂಜಯ್ ಮಾಳಿ, ತಮ್ಮ ಚಾಲಕ ಜಫರ್ ಗಾಗಿ ನಿತ್ಯವೂ ರಂಜಾನ್ ಉಪವಾಸ ಮಾಡುತ್ತಿದ್ದಾರೆ. ಜಫರ್ ನಾರೋಗ್ಯಪೀಡಿತರಾಗಿದ್ದು, ಅನಾರೋಗ್ಯದ ಮಧ್ಯೆಯೂ ಜಫರ್ ಮಾಳಿ ಅವರ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಕಾರಣಕ್ಕೆ ಜಫರ್ ಬದಲಾಗಿ ಸಂಜಯ್ ಮಾಳಿ ನಿತ್ಯವೂ ರಂಜಾನ್ ಉಪವಾಸ ಕೈಗೊಂಡಿದ್ದಾರೆ. ರಂಜಾನ್ ವೇಳೆಯೂ ಜಫರ್ ಕರ್ತವ್ಯ ನಿರ್ವಹಿಸಬಹುದಾದರೆ ನಾನೇಕೆ ಆತನಿಗಾಗಿ ಉಪವಾಸ ವೃತ ಕೈಗೊಳ್ಳಬಾರದು ಎಂದು ಕೇಳುತ್ತಾರೆ ಸಂಜಯ್ ಮಾಳಿ.