ಗುಜರಾತ್​ ಚುನಾವಣೆ ಫಲಿತಾಂಶ ಜತೆಗೆ ನಾಳೆ  ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. 

ನವದೆಹಲಿ (ಡಿ.17): ಗುಜರಾತ್​ ಚುನಾವಣೆ ಫಲಿತಾಂಶ ಜತೆಗೆ ನಾಳೆ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. 

ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದ ವಿಧಾನಸಭೆಗೆ 68 ಸ್ಥಾನಗಳಿಗೆ 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 68 ಕ್ಷೇತ್ರಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆದಿದೆ. ನಾಳೆ ಬೆಳಗ್ಗೆ 8 ಘಂಟೆಯಿಂದ ಮತದಾನ ಏಣಿಕೆ ಪ್ರಕ್ರಿಯೆ ಶುರುವಾಗಲಿದೆ. ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್​ ತನ್ನ ಅಧಿಕಾರ ಉಳಿಸಿಕೊಳ್ಳುತ್ತಾ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಬಹುಮತ ಸಿಗಲಿದೆ ಎಂದಿವೆ. ಈ ಇಲ್ಲ ಕುತೂಹಲಗಳಿಗೆ ನಾಳೆ ಚುನಾವಣಾ ಫಲಿತಾಂಶ ನಂತರ ತೆರೆ ಬೀಳಲಿದೆ.