ಹಿಜಾಬ್ ಧರಿಸಿದ್ದಕ್ಕೆ ಕಾನೂನು ಪದವಿ ನೀಡಲು ಬಾರ್ ಕೌನ್ಸಿಲ್ ನಕಾರನೈಜಿರಿಯಾ ನಡುಗಿಸಿದ ದಿಟ್ಟ ಮಹಿಳೆಯ ಹೋರಾಟಹೋರಾಟದ ಮೂಲಕ ಕಾನೂನು ಪದವಿ ಪಡೆದ ಫಿರ್ದೋಸಿ ಅಮ್ಸಾ
ನೈಜಿರಿಯಾ(ಜೂ.22): ಇದು ನೈಜಿರಿಯಾದ ದಿಟ್ಟ ಮಹಿಳೆಯ ಹೋರಾಟದ ಯಶೋಗಾತೆ. ಹಿಜಾಬ್ ಧರಿಸಿದ ಕಾರಣಕ್ಕೆ ಮಹಿಳೆಯೋರ್ವರಿಗೆ ನೈಜಿರಿಯಾ ಬಾರ್ ಕೌನ್ಸಿಲ್ ಪದವಿ ನೀಡಲು ನಿರಾಕರಿಸಿತ್ತು. ಆದರೆ ಸತತ ಒಂದು ವರ್ಷಗಳ ಕಾಲ ಹೋರಾಟ ನಡೆಸಿ ಫಿರ್ದೋಸಿ ಅಮ್ಸಾ ಎಂಬ ಮಹಿಳೆ ತಮ್ಮ ಪದವಿ ಪಡೆದಿದ್ದಾರೆ.
ಇಲ್ಲಿನ ಇಲ್ಲೊರಿನ್ ಯುನಿವರ್ಸಿಟಿಯಲ್ಲಿ ಕಾನೂನು ಪದವಿ ಪೂರೈಸಿದ್ದ ಫಿರ್ದೋಸಿ ಅಮ್ಸಾ ಅವರಿಗೆ ವಕೀಲ ಪದವಿ ನೀಡಲು ಬಾರ್ ಕೌನ್ಸಿಲ್ ನಿರಾಕರಿಸಿತ್ತು. ಕಾರಣ ಆಕೆ ಹಿಜಾಬ್ ಧರಿಸಿ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಬಾರ್ ಕೌನ್ಸಿಲ್ ಹೇಳಿತ್ತು.
ಅಲ್ಲದೇ ಪ್ರತೀ ವರ್ಷ ನಡೆಯುವ ಬಾರ್ ಕೌನ್ಸಿಲ್ ಸಭೆಗೆ ಆಕೆ ಹಿಜಾಬ್ ಧರಿಸಿ ಬಂದಿದ್ದಕ್ಕೆ ಆಕೆಗೆ ಪದವಿ ನೀಡದೇ ಅನ್ಯಾಯ ಮಾಡಲಾಗಿತ್ತು. ಇದರಿಂದ ಕೆರಳಿದ ಫಿರ್ದೋಸಿ ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ಹೇಳಿದ್ದಲ್ಲದೇ, ಬಾರ್ ಕೌನ್ಸಿಲ್ ನಿರ್ಣಯದ ವಿರುದ್ದ ಹೋರಾಟ ನಡೆಸಿದ್ದರು. ಫಿರ್ದೋಸಿ ಅವರ ಹೋರಾಟಕ್ಕೆ ನೈಜಿರಿಯಾದ್ಯಂತ ಬೆಂಬಲ ಕೂಡ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಫಿರ್ದೋಸಿಗೆ ಕಾನೂನು ಪದವಿ ಮಾನ್ಯ ಮಾಡಿದೆ. ಅಷ್ಟೇ ಅಲ್ಲದೇ ಆಕೆ ಹಿಜಾಬ್ ಧರಿಸಿಯೇ ನ್ಯಾಯಾಲಯದ ಕಲಾಪ ಮತ್ತು ಬಾರ್ ಕೌನ್ಸಿಲ್ ಸಭೆಗಳಿಹೆ ಹಾಜರಾಗಬಹುದು ಎಂದು ಆದೇಶ ಹೊರಡಿಸಿದೆ. ಫಿರ್ದೋಸಿ ಹೋರಾಟ ನೈಜಿರಿಯಾದ ಮಹಿಳೆಯರಿಗೆ ಸಂದ ಜಯ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.
