ರಾಜ್ಯ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಿಂದ 500 ಮೀ ಅಂತರದಲ್ಲಿ ಯಾವುದೇ ಮದ್ಯ ಮಾರಾಟ ಅಂಗಡಿಗಳಿರಬಾರದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯಗಳಿಗೆ ತುಸು ರಿಲೀಫ್ ನೀಡಿದೆ. ಪ್ರಮುಖ ನಗರಗಳಲ್ಲಿ ಹಾದು ಹೋಗಿರುವ ರಸ್ತೆಗಳನ್ನು ರಾಜ್ಯಗಳು ಡಿನೋಟಿಫೈ ಮಾಡಿಕೊಳ್ಳಬಹುದೆಂದು ಕೋರ್ಟ್ ಹೇಳಿದೆ.
ನವದೆಹಲಿ (ಜು.04): ರಾಜ್ಯ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಿಂದ 500 ಮೀ ಅಂತರದಲ್ಲಿ ಯಾವುದೇ ಮದ್ಯ ಮಾರಾಟ ಅಂಗಡಿಗಳಿರಬಾರದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯಗಳಿಗೆ ತುಸು ರಿಲೀಫ್ ನೀಡಿದೆ. ಪ್ರಮುಖ ನಗರಗಳಲ್ಲಿ ಹಾದು ಹೋಗಿರುವ ರಸ್ತೆಗಳನ್ನು ರಾಜ್ಯಗಳು ಡಿನೋಟಿಫೈ ಮಾಡಿಕೊಳ್ಳಬಹುದೆಂದು ಕೋರ್ಟ್ ಹೇಳಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರು ಮದ್ಯ ಸೇವಿಸಿ ವೇಗವಾಗಿ ವಾಹನ ಚಲಾಯಿಸುವುದನ್ನು, ಅದರಿಂದಾಗುವ ಅನಾಹುತಗಳನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿರುವ ಮದ್ಯದಂಗಡುಗಳನ್ನು ಮುಚ್ಚಲು ಸುಪ್ರೀಂಕೋರ್ಟ್ ಈ ಆದೇಶ ನೀಡಿತ್ತು. ಇದಕ್ಕೆ ತುಸು ಮಾರ್ಪಾಡು ಮಾಡಿ ರಾಜ್ಯ ಮತ್ತು ಜಿಲ್ಲೆಯ ರಸ್ತೆಗಳನ್ನು ಡಿನೋಟಿಫೈ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದೆ.
ಸುಪ್ರೀಂಕೋರ್ಟ್’ನ ಈ ನಡೆಯಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಸಾಕಷ್ಟು ಬಾರ್’ಗಳಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಐಟಿಸಿ ವಿಂಡ್ಸರ್, ಲಲಿತ್ ಅಶೋಕ್, ಓಬೆರಾಯ್, ಲೇ ಮೆರಿಡಿಯನ್, ದಿ ಓಬೆರಾಯ್ ಹೋಟೆಲ್’ಗಳಿಗೆ ಅನುಕೂಲವಾಗಲಿದೆ.
ನಗರಗಳು, ಪಟ್ಟಣಗಳಲ್ಲಿ ಹಾದುಹೋಗುವ 1,476 ಕಿಮೀ ರಾಜ್ಯ ಹೆದ್ದಾರಿಗಳು, 700 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕಾಗಿದೆ.
