Asianet Suvarna News Asianet Suvarna News

ಬಜೆಟ್ 2017ರ ಮುಖ್ಯಾಂಶಗಳು

ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಮುಂದಾದಾಗ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಮಾಜಿ ಕೇಂದ್ರ ಸಚಿವ ಇ ಅಹಮದ್ ನಿಧನರಾಗಿರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು ಮುಂದೂಡಬೇಕೆಂದು ವಿಪಕ್ಷಗಳು ಆಗ್ರಹಿಸಿದವು. ಆದರೆ ಅದಕ್ಕೆ ಸ್ವೀಕರ್ ಸುಮಿತ್ರಾ ಮಹಾಜನ್ ಅವಕಾಶ ನೀಡಲಿಲ್ಲ. ಇ ಅಹಮದ್ ಅವರಿಗೆ ಸಂತಾಪ ಸೂಚಿಸಿ ಬಜೆಟ್ ಮಂಡನೆಗೆ ಅನುಮತಿ ನೀಡಲಾಯ್ತು.

Highlights of Union Budget 2017

ನವದೆಹಲಿ (ಫೆ.01): ಐನೂರು, ಸಾವಿರ ಮುಖಬೆಲೆ ನೋಟುಗಳ ನಿಷೇಧದ ಬಳಿಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು 2017-18ನೇ ಸಾಲಿನ ಬಜೆಟ್ ಮಂಡಿಸಿದರು.

ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಮುಂದಾದಾಗ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಮಾಜಿ ಕೇಂದ್ರ ಸಚಿವ ಇ ಅಹಮದ್ ನಿಧನರಾಗಿರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು ಮುಂದೂಡಬೇಕೆಂದು ವಿಪಕ್ಷಗಳು ಆಗ್ರಹಿಸಿದವು. ಆದರೆ ಅದಕ್ಕೆ ಸ್ವೀಕರ್ ಸುಮಿತ್ರಾ ಮಹಾಜನ್ ಅವಕಾಶ ನೀಡಲಿಲ್ಲ. ಇ ಅಹಮದ್ ಅವರಿಗೆ ಸಂತಾಪ ಸೂಚಿಸಿ ಬಜೆಟ್ ಮಂಡನೆಗೆ ಅನುಮತಿ ನೀಡಲಾಯ್ತು.

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಕೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಇದಾಗಿತ್ತು. ಈ ಬಾರಿಯ ಬಜೆಟ್'ನ ಒಟ್ಟು ಗಾತ್ರವು ರೂ. 21 ಲಕ್ಷದ 47 ಸಾವಿರ ಕೋಟಿಯಾಗಿದೆ. ಜೇಟ್ಲಿ ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. 

 

Highlights of Union Budget 2017

ಕ್ಯಾಶ್'ಲೆಸ್ ವ್ಯವಹಾರ:

ಕ್ಯಾಶ್'ಲೆಶ್ ವ್ಯವಹಾರಕ್ಕೆ ಆದ್ಯತೆ ನೀಡಿರುವ ಅರುಣ್ ಜೇಟ್ಲಿ, ನಗದು ವ್ಯವಹಾರಕ್ಕೆ ಬ್ರೇಕ್ ಹಾಕಿದ್ದಾರೆ. 3 ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರಕ್ಕೆ ತಡೆ ನೀಡಲಾಗಿದೆ. 3 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ಬ್ಯಾಂಕ್ ಮೂಲಕವೇ ಆಗಬೇಕು. ಏಕಕಾಲಕ್ಕೆ 3 ಲಕ್ಷ ನಗದು ವ್ಯವಹಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಾಮಾಜಿಕ ಭದ್ರತೆ:

ಬಜೆಟ್'ನಲ್ಲಿ ಸಾಮಾಜಿಕ ಭದ್ರತೆಗೆ ಒತ್ತು ನೀಡಲಾಗಿದೆ. 14 ಲಕ್ಷ ಅಂಗನವಾಡಿ ಕೇಂದ್ರಗಳು ಮಹಿಳಾ ಶಕ್ತಿ ಕೇಂದ್ರದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಇವುಗಳ ಮೂಲಕ ಗರ್ಭಿಣಿಯರ ಖಾತೆಗೆ 6 ಸಾವಿರ ರೂ. ಮಂಜೂರು ಮಾಡಲಾಗುವುದು. 1.5 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಗೊಳಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ 5 ಸಾವಿರ ವೈದ್ಯರ ನೇಮಕ ಮಾಡಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 1.84 ಲಕ್ಷ ಕೋಟಿ ನೀಡಲಾಗುವುದು.

Highlights of Union Budget 2017

ಕೈಗಾರಿಕಾ ವಲಯ:

ಸಣ್ಣ, ಮಧ್ಯಮ ಕೈಗಾರಿಕೆಗಳ ಕಾರ್ಪೊರೇಟ್​ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಲಾಗಿದೆ.  50 ಕೋಟಿ ವಹಿವಾಟು ಸಂಸ್ಥೆಗಳಿಗೆ ಶೇ.25 ತೆರಿಗೆ, 67 ಲಕ್ಷ ಕಂಪೆನಿಗಳು ಈ ವ್ಯಾಪ್ತಿಗೆ ಬರುತ್ತವೆ. ಎಲ್​ಎನ್​ಜಿ ಕಸ್ಟಮ್ಸ್ ಶುಲ್ಕ ಶೇ.5ರಿಂದ ಶೇ.2.5ಕ್ಕೆ ಇಳಿಕೆ ಮಡಲಾಗಿದೆ.

ಸುಸ್ತಿದಾರರಿಗೆ ಸಂಕಷ್ಟ:

ಸಾಲ ಪಡೆದು ಪರಾರಿಯಾಗುವವರಿಗೆೀ ಬಜೆಟ್'ನಲ್ಲಿ ಕಠಿಣ ಸಂದೇಶವನ್ನು ನೀಡಲಾಗಿದೆ.  ಅಂಥವರ ಆಸ್ತಿ ಸಂಪೂರ್ಣವಾಗಿ  ಜಪ್ತಿ ಮಾಡಲಾಗುವುದು. ಆರ್ಥಿಕ ಅಪರಾಧಗಳ ದಂಡನೆಗೆ ಹೊಸ ಕಾನೂನು ರೂಪಿಸುವುದಾಗಿ ಹೇಳಲಾಗಿದೆ.

ಅಕ್ರಮ ಬಂಡವಾಳಕ್ಕೆ ಬ್ರೇಕ್:
ಅಕ್ರಮ ಬಂಡವಾಳ ನಿಗ್ರಹಕ್ಕೆ ಹೊಸ ವಿಧೇಯಕ ಜಾರಿ ಮಾಡುವುದಾಗಿ ಘೋಷಿಸಲಾಗಿದೆ.  ಅಕ್ರಮ ಚಿಟ್'​ಫಂಡ್​ಗಳ ಕಡಿವಾಣಕ್ಕೆ ಹೊಸ ಕಾನೂನು ತರಲಾಗುವುದು ಹಾಗೂ ಚೆಕ್ ಮೂಲಕವೇ ರಾಷ್ಟ್ರೀಯ ಬಾಂಡ್​ ಖರೀದಿ ಮಾಡಬೇಕು. ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ ಕೊಟ್ಟರೆ ತೆರಿಗೆ ಇಲ್ಲ.

ಉದ್ಯೋಗ ಸೃಷ್ಟಿ:
600 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ ಕೇಂದ್ರ ಸ್ಥಾಪನೆ ಮಾಡಲಾಗುವುದು. ಚರ್ಮೋದ್ಯಮಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಹಾಗೂ ಮುದ್ರಾ ಬ್ಯಾಂಕ್ ಮೂಲಕ ಸಾಲಕ್ಕೆ 2.44 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.

ಇನ್ನಷ್ಟು ಸುದ್ದಿಗಳಿಗೆ ಈ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ:

ಬಜೆಟ್ 2017: ರೈಲು ಸ್ವಚ್ಛತೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ಆರೋಗ್ಯ ಕ್ಷೇತ್ರಕ್ಕೆ ಬಜೆಟ್'ನಲ್ಲೇನಿದೆ?

ರಕ್ಷಣಾ ವಲಯ ಅನುದಾನದಲ್ಲಿ ಸುಮಾರು ಶೇ.10 ಏರಿಕೆ

ಆದಾಯ ಪಾವತಿದಾರರಿಗೆ ರಿಲೀಫ್; ತೆರಿಗೆ ಮಿತಿ ಏರಿಕೆಯಿಲ್ಲ

ರಾಜಕೀಯ ಪಕ್ಷಗಳಿಗೆ ಶಾಕ್ ಕೊಟ್ಟ ಬಜೆಟ್

ಬಜೆಟ್ 2017: ವ್ಯಾಪಾರಿಗಳಿಗೆ ಸಿಹಿ ಸುದ್ದಿ

ಡಿಜಿಟಲ್ ಪಾವತಿಗೆ ಒತ್ತು ಕೊಟ್ಟ ಬಜೆಟ್

ರಾಜ್ಯದ ರೈಲ್ವೇಗೆ ಬಜೆಟ್'ನಲ್ಲಿ ಸಿಕ್ಕಿದ್ದೇನು?

Follow Us:
Download App:
  • android
  • ios