ಪಿಂಪ್‌ಗಳು ತಮ್ಮ ತಮ್ಮ ಮೊಬೈಲ್‌ನಲ್ಲಿ ಕಾಲ್‌ಗರ್ಲ್‌ಗಳ ಭಾವಚಿತ್ರಗಳು ಮತ್ತು ಅವರ ರೇಟ್‌ಗಳನ್ನು ಹೊಂದಿದ್ದರು

ಗುರ್ಗಾಂವ್ (ಅ.20): ಹರಿಯಾಣ ಪೊಲೀಸರು ಹೈ ಪ್ರೊಫೈಲ್‌ ಸೆಕ್ಸ್‌ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಯುವತಿಯರಲ್ಲಿ ಮೂವರು ದೆಹಲಿ ಮೂಲದವರಾಗಿದ್ದು, ಇತರ ಇಬ್ಬರು ವಿದೇಶಿ ಯುವತಿಯರಾಗಿದ್ದಾರೆ. ಗಮನಾರ್ಹ ವಿಷಯವೆಂದರೆ, ವಾಟ್ಸಪ್‌ ಮೂಲಕ ಯುವತಿಯರ ಚಿತ್ರಗಳನ್ನು ಕಳುಹಿಸಿ ರೇಟ್ ಕೂಡಾ ವಾಟ್ಸಪ್‌ನಲ್ಲಿಯೇ ಫಿಕ್ಸ್ ಮಾಡಲಾಗುತ್ತಿತ್ತಂತೆ. ಪಿಂಪ್‌ಗಳು ತಮ್ಮ ತಮ್ಮ ಮೊಬೈಲ್‌ನಲ್ಲಿ ಕಾಲ್‌ಗರ್ಲ್‌ಗಳ ಭಾವಚಿತ್ರಗಳು ಮತ್ತು ಅವರ ರೇಟ್‌ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಸ್ ರಾಕೆಟ್ ಅಡ್ಡೆಯ ಮೇಲೆ ನಡೆದ ಪೊಲೀಸರ ದಾಳಿಯಲ್ಲಿ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿದೇಶಿ ಯುವತಿಯರು ಪಾಸ್‌ಪೋರ್ಟ್ ಕೂಡಾ ಹೊಂದಿಲ್ಲವೆಂದು ಪೊಲೀಸ್​ ಮೂಲಗಳು ತಿಳಿಸಿವೆ.