Asianet Suvarna News Asianet Suvarna News

ಸವದಿಗೆ ಡಿಸಿಎಂ ಸ್ಥಾನ : ಯಡಿಯೂರಪ್ಪಗೆ ಶಾಕ್‌

ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ವರಿಷ್ಠರೇ ಸೂಚಿಸಿದ್ದು ಇದು ಸ್ವತಃ ಸಿಎಂ ಯಡಿಯೂರಪ್ಪ ಅವರಿಗೂ ಶಾಕ್ ಆಗಿತ್ತು. 

High Command Suggested BS Yediyurappa to DCM Post for Lakshman Savadi
Author
Bengaluru, First Published Aug 27, 2019, 10:28 AM IST
  • Facebook
  • Twitter
  • Whatsapp

ಬೆಂಗಳೂರು [ಆ.27]: ಸಚಿವ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಅವರ ಹೆಸರು ಪ್ರಸ್ತಾಪವಾದ ಬಳಿಕ ಯಡಿಯೂರಪ್ಪ ಅವರೂ ಶಾಕ್‌ಗೊಳಗಾದರು. ಸೋತವರಿಗೆ ಯಾಕೆ ಸಚಿವ ಸ್ಥಾನ ನೀಡಬೇಕು ಎಂಬುದು ಅವರ ಪ್ರಶ್ನೆಯಾಗಿತ್ತು. 

ಆದರೆ, ನಮ್ಮ ಸೂಚನೆಯನ್ನು ಪಾಲಿಸಿ ಎಂದಷ್ಟೇ ಹೇಳಿದ ವರಿಷ್ಠರು ನಂತರ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಬೇಕು ಎಂದಾಗ ಮಾತ್ರ ಯಡಿಯೂರಪ್ಪ ಆಘಾತಕ್ಕೊಳಗಾದರು ಎಂದು ತಿಳಿದು ಬಂದಿದೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ವರಿಷ್ಠರ ಸೂಚನೆಯನ್ನು ಧಿಕ್ಕರಿಸುವಂತಿಲ್ಲ. ಸಂಘ ಪರಿವಾರದ ಮುಖಂಡರ ಮೂಲಕ ಸವದಿ ಅವರ ಬಗ್ಗೆ ಹೈಕಮಾಂಡ್‌ ಬಳಿ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲೇಬೇಕಾಯಿತು.

Follow Us:
Download App:
  • android
  • ios