ಬೆಂಗಳೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್  ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ನಡುವೆ ಭಿನ್ನಮರ ಭುಗಿಲೇಳುತ್ತದೆ. ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. 

ಸದ್ಯ ಕಾಂಗ್ರೆಸ್ ಮುಖಂಡ ಎಚ್.ಎಮ್ ರೇವಣ್ಣ ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷದಲ್ಲಿ ಈಗ ಎಲ್ಲರೂ ಮಾತನಾಡಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ: ದೇವೇಗೌಡರು ಹಾಸನ ಬಿಟ್ಟು ಮೈಸೂರಲ್ಲಿ ನಿಲ್ತಾರಾ?

ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿಯಾದ ವಾತಾವರಣ ಇಲ್ಲ. ಇಲ್ಲಿ ಸ್ವಲ್ಪ ಬಿಗಿ ಭದ್ರತೆಯ ವ್ಯವಸ್ಥೆ ಇದೆ.  ಹೈಕಮಾಂಡ್ ಅನುಮತಿ ಪಡೆದುಕೊಂಡೇ ಮಾತಾಡಬೇಕಾಗುತ್ತದೆ ಎಂದಿದ್ದಾರೆ. 

ಇನ್ನು ಎಲ್ಲ ವಿಚಾರದಲ್ಲಿಯೂ ಎಚ್.ಡಿ ರೇವಣ್ಣ ಮೂಗು ತುರಿಸುತ್ತಾರೆ. ಇದು ಸರಿಯಲ್ಲ. ತೀರ್ಮಾನ ಆಗಿರುವ ವಿಚಾರಗಳಿಗೆ ಅಡ್ಡಗಾಲು ಹಾಕುವುದು ಎಷ್ಟು ಸರಿ ನಿಗಮ ಮಂಡಳಿ ನೇಮಕಾತಿ ವಿಚಾರದ ಸಂಬಂಧ ಪ್ರಶ್ನೆ ಮಾಡಿದ್ದಾರೆ. 

ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಒಟ್ಟಾಗಿ ಕುಳಿತೇ ನಿಗಮ ಮಂಡಳಿ ಪಟ್ಟಿ ಸಿದ್ಧಮಾಡಲಾಗಿತ್ತು. ಎಚ್.ಡಿ ರೇವಣ್ಣ ಏನು ಸೂಪರ್ ಸಿಎಂ ಅಲ್ಲ ಎಂದು ಎಚ್.ಎಂ ರೇವಣ್ಣ ವಾಗ್ದಾಳಿ ನಡೆಸಿದರು. 

ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ಕೆ.ಸಿ ವೇಣುಗೋಪಾಲ್ ಜೊತೆ ಚರ್ಚೆ ನಡೆಸಿ, ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಸುವಂತೆ ಒತ್ತಾಯಿಸುತ್ತೇವೆ ಎಂದರು.

ಸದ್ಯ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ ಜೆಡಿಎಸ್ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕೇವಲ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡುತ್ತಿದೆ.  ಬಿಜೆಪಿಯನ್ನು ಅಧಿಕಾರ ದೂರ ಇಡಬೇಕು ಎನ್ನುವ  ಒಂದೇ ಕಾರಣಕ್ಕೆ ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ.ಸಮಸ್ಯೆಗಳನ್ನು ಪರಿಹಾರ ಮಾಡಲು ಪರಸ್ಪರ ಸಹಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ.