ನವದೆಹಲಿ (ಸೆ.30): ಪಾಕ್ ಅಕ್ರಮಿತ ಪ್ರದೇಶಕ್ಕೆ ಒಳ ನುಗ್ಗಿ ಉಗ್ರರನ್ನು ಸೆದೆ ಬಡಿದ ನಂತರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇಂದು ಬೆಳಗ್ಗೆ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪರಾಮರ್ಶೆ ಅವಲೋಕನ ಸಭೆ ನಡೆಯಿತು. ದಾಳಿಯ ನಂತರ ಗಡಿಯಲ್ಲಿನ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಪಾಕ್ ವಶದಲ್ಲಿರುವ ಯೋಧನನ್ನು ಸುರಕ್ಷಿತವಾಗಿ ಕರೆತರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಸೀಮಿತ ಕಾರ್ಯಾಚರಣೆ ವೇಳೆ ಭಾರತೀಯ ಯೋಧ ಪಾಕ್ ಸೈನಿಕರಿಗೆ ಸೆರೆಸಿಕ್ಕಿಲ್ಲ. ಈ ಹಿಂದೆ ನಮ್ಮ ಯೋಧನೋರ್ವ ಶಸ್ತ್ರಾಸ್ತ್ರದೊಂದಿಗೆ ಗಡಿ ನಿಯಂತ್ರಣ ರೇಖೆ ದಾಟಿದ್ದು ಆ ವೇಳೆ ಪಾಕ್ ಸೈನಿಕರು ನಮ್ಮ ಯೋಧನನ್ನು ಬಂಧಿಸಿತ್ತು.
ಇದೀಗ ಭಾರತೀಯ ಯೋಧರ ಕಾರ್ಯಾಚರಣೆ ವೇಳೆ ಬಂಧಿಸಿರುವುದಾಗಿ ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದಲ್ಲದೆ ಎಂಟು ಭಾರತೀಯ ಯೋಧರ ಹತ್ಯೆಮಾಡಿದ್ದೇವೆ ಎಂದು ಹೇಳಿರು ಪಾಕಿಸ್ತಾನ ಹೇಳಿಕೆಯನ್ನು ರಾಜನಾಥ್ ಸಿಂಗ್ ತಳ್ಳಿ ಹಾಕಿದ್ದಾರೆ.
