ಒಂದು ಗುಂಪು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌'ನಲ್ಲಿ ಇದೆ. ಅಲ್ಲೊಂದು ಇವರ ಮಸೀದಿ ಇದೆ. ಅಲ್ಲಿ ಇವರು ಗುಪ್ತವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಯುವಕರ ಬ್ರೈನ್‌'ವಾಶ್ ಮಾಡಿ ಇವರ ಗುಂಪಿಗೆ ಸೇರಿಸುತ್ತಿದ್ದಾರೆ. ಹಲವು ಸುಶಿಕ್ಷಿತ ಯುವಕರು ಇವರ ಗುಂಪಿಗೆ ಸೇರಿದ್ದಾರೆ. ಇವರು ಸಲಫಿಗಳೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅರಿವು ಇರಲಿ.

ಮಂಗಳೂರು(ಅ.04): ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವರು ಬ್ಯಾರಿ ಭಾಷೆಯಲ್ಲಿ ಐಸಿಸ್ ಮಂಗಳೂರಿನಲ್ಲಿ ಬೇರೂರಿರುವ ಕುರಿತು ಭಾಷಣ ಮಾಡಿದ್ದು, ಇದರ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

 ಆ ಭಾಷಣದ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ...

ದಮ್ಮಾಜ್‌'ಗಳ ಗುಂಪು ಯಾರ ಜೊತೆಗೂ ಮಾತುಕತೆ ನಡೆಸುವುದಿಲ್ಲ. ಭಾರತದಲ್ಲಿ ಜೀವನ ಮಾಡಲು ಅಸಾಧ್ಯ ಎಂದು ಅವರು ವಲಸೆ ಹೋಗಲು ಮುಂದಾಗಿದ್ದಾರೆ. ಇಲ್ಲಿಯ ಶಾಲೆಗಳಿಗೆ ಅವರ ಮಕ್ಕಳನ್ನು ಕಳುಹಿಸಲು ತಯಾರಿಲ್ಲ. ಇಲ್ಲಿಯ ಬಸ್‌'ಗಳಲ್ಲೂ ಅವರು ಪ್ರಯಾಣಿಸುವುದಿಲ್ಲ. ಕೆಲಸಕ್ಕೂ ಹೋಗುವುದಿಲ್ಲ.

ಪರಿಚಯದ ಒಬ್ಬ ಸಾಫ್ಟ್‌'ವೇರ್ ಎಂಜಿನಿಯರ್ ಸಂಸ್ಥೆಯಲ್ಲಿ ಕೆಲಸಕ್ಕಿದ್ದ. ಕಲ್ಲಡ್ಕದಲ್ಲಿ ಇರುವ ಒಂದು ದಮ್ಮಾಜ್ ಗುಂಪಿನ ಜೊತೆಗೆ ಆತ ಗುರುತಿಸಿಕೊಂಡಿದ್ದ. ನಂತರ ಸಂಸ್ಥೆಗೆ ರಾಜಿನಾಮೆ ಕೊಟ್ಟು ತಿರುಗಾಡುತ್ತಿದ್ದ. ಇತ್ತೀಚೆಗೆ ಕೇರಳದ ಕೆಲವರು ಯೆಮನ್ ದೇಶದ ದಮ್ಮಾಜ್ ಎಂಬಲ್ಲಿಗೆ ತೆರಳಿ ಸಿಕ್ಕಿಬಿದ್ದಿದ್ದರು. ಅವರು ಕೂಡಾ ಇದೇ ಗುಂಪಿನ ಸದಸ್ಯರು. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಇವರ ಉದ್ದೇಶ ಹಿಜಿರಾ(ವಲಸೆ) ಜಿಹಾದ್ ಮಾಡಿ ಪ್ರಾಣ ತ್ಯಾಗ ಮಾಡುವುದು. ಇವರ ಜೊತೆ ವಲಸೆ ಹೋದ ಮಹಿಳೆಯೊಬ್ಬಳು ತಮ್ಮ ಮನೆಯವರಿಗೆ ‘ಭೂಮಿಯಲ್ಲಿ ಸಿಗಲ್ಲ, ಸ್ವರ್ಗದಲ್ಲಿ ಸಿಗ್ತೇನೆ’ ಎಂದು ಮೆಸೇಜ್ ಹಾಕಿದ್ದಳು. ಇಂತಹ ಒಂದು ಗುಂಪು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌'ನಲ್ಲಿ ಇದೆ. ಅಲ್ಲೊಂದು ಇವರ ಮಸೀದಿ ಇದೆ. ಅಲ್ಲಿ ಇವರು ಗುಪ್ತವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಯುವಕರ ಬ್ರೈನ್‌'ವಾಶ್ ಮಾಡಿ ಇವರ ಗುಂಪಿಗೆ ಸೇರಿಸುತ್ತಿದ್ದಾರೆ. ಹಲವು ಸುಶಿಕ್ಷಿತ ಯುವಕರು ಇವರ ಗುಂಪಿಗೆ ಸೇರಿದ್ದಾರೆ. ಇವರು ಸಲಫಿಗಳೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅರಿವು ಇರಲಿ. ಇವರಿಗೆ ಧನಸಹಾಯ ಮಾಡುವ ಜನರಿದ್ದಾರೆ. ಮೂಡುಬಿದಿರೆಯ ಒಬ್ಬ ವ್ಯಕ್ತಿ ಕೂಡ ಧನ ಸಹಾಯ ಮಾಡುತಿದ್ದಾರೆ. ಇವರೊಂದಿಗೆ ತಮ್ಮ ಮಕ್ಕಳನ್ನು ಬೆರೆಯದಂತೆ ನೋಡಿಕೊಳ್ಳಿ. ನಿಮ್ಮ ಹೆಣ್ಣುಮಕ್ಕಳನ್ನು ಇವರಿಗೆ ಮದುವೆ ಮಾಡಿ ಕೊಡದಿರಿ ಎಂದು ಮುಸ್ಲಿಂ ಧರ್ಮಗುರು ಹೇಳಿದ್ದಾನೆ.