Asianet Suvarna News Asianet Suvarna News

ಫೋನಿ ಅಪರೂಪದ ಚಂಡಮಾರುತ ಏಕೆ?

ಒಡಿಶಾ ಕರಾವಳಿಯಲ್ಲಿ ಗಂಟೆಗೆ 200 ಕಿ.ಮೀ. ವೇಗದ ಭೀಕರ ಚಂಡಮಾರುತ ಫೋನಿ ಶುಕ್ರವಾರ ಅಪ್ಪಳಿಸಿದೆ. ಭಾರತದಲ್ಲಿ ಇದುವರೆಗೆ ಅಪ್ಪಳಿಸಿದ ಚಂಡಮಾರುತಗಳಿಗಿಂತ ‘ಫೋನಿ’ಯನ್ನು ಅಪರೂಪದ ಚಂಡಮಾರುತ ಎಂದು ಕರೆಯಲಾಗುತ್ತಿದೆ. ಅದು ಏಕೆ ಎಂಬ ಉತ್ತರ ಇಲ್ಲಿದೆ.
 

Here are the reasons for why fani cyclone is special
Author
Bengaluru, First Published May 5, 2019, 9:28 AM IST

ಒಡಿಶಾ ಕರಾವಳಿಯಲ್ಲಿ ಗಂಟೆಗೆ 200 ಕಿ.ಮೀ. ವೇಗದ ಭೀಕರ ಚಂಡಮಾರುತ ಫೋನಿ ಶುಕ್ರವಾರ ಅಪ್ಪಳಿಸಿದೆ. ಪರಿಣಾಮ ಒಡಿಶಾದಲ್ಲಿ 12 ಮಂದಿ ಬಲಿಯಾಗಿದ್ದಾರೆ. ರಾಜ್ಯದಾದ್ಯಂತ ಸಾಕಷ್ಟುಹಾನಿಯಾಗಿದೆ. 

ಇತರೆ ರಾಜ್ಯಗಳು ಸೇರಿದಂತೆ ಬಾಂಗ್ಲಾ ಕೂಡ ಇದರ ಭೀಕರತೆಯನ್ನು ಅನುಭವಿಸಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅತಿ ಹೆಚ್ಚು ಜನರನ್ನು ಸ್ಥಳಾಂತರಿಸಿದ ಸೈಕ್ಲೋನ್‌ ಇದಾಗಿದೆ. ಭಾರತದಲ್ಲಿ ಇದುವರೆಗೆ ಅಪ್ಪಳಿಸಿದ ಚಂಡಮಾರುತಗಳಿಗಿಂತ ‘ಫೋನಿ’ಯನ್ನು ಅಪರೂಪದ ಚಂಡಮಾರುತ ಎಂದು ಕರೆಯಲಾಗುತ್ತಿದೆ. ಅದು ಏಕೆ ಎಂಬ ಉತ್ತರ ಇಲ್ಲಿದೆ.

ಏಪ್ರಿಲ್‌ ಚಂಡಮಾರುತ ಡೇಂಜರಸ್‌!

2000ನೇ ಇಸವಿಯಿಂದ ಈಚೆಗೆ ಹಿಂದೂ ಮಹಾ ಸಾಗರದ ಉತ್ತರ ಭಾಗಕ್ಕೆ ಅಪ್ಪಳಿಸಿದ ಚಂಡಮಾರುತಗಳ ವೇಗಕ್ಕೆ ಹೋಲಿಸಿದರೆ, ಫೋನಿಯು 7ನೇ ಅತಿದೊಡ್ಡ ಮಾರುತ. ಬಂಗಾಳಕೊಲ್ಲಿಯಲ್ಲಿ ಏಪ್ರಿಲ್‌ ತಿಂಗಳಲ್ಲಿ ಕಾಣಿಸಿಕೊಳ್ಳುವ ಮಾರುತಗಳು ಬಹಳ ಅಪರೂಪದವು ಮತ್ತು ಭಾರತದಲ್ಲಿ ಅತಿ ಹೆಚ್ಚು ಹಾನಿಯನ್ನುಂಟು ಮಾಡಿವೆ.

ಸದ್ಯ ಏಪ್ರಿಲ್‌ ತಿಂಗಳಿನಲ್ಲಿಯೇ ಅಪ್ಪಳಿಸಿರುವ ಫೋನಿ ಕೂಡ ಚಂಡಮಾರುತಗಳಲ್ಲೇ ವಿಭಿನ್ನವಾದುದು. 1891ರಿಂದ 2017ರ ವರೆಗೆ ಏಪ್ರಿಲ್‌ ತಿಂಗಳಲ್ಲಿ ಬಂಗಾಳಕೊಲ್ಲಿಗೆ ಅಪ್ಪಳಿಸಿರುವ ತೀವ್ರ ಚಂಡಮಾರುತಗಳ ಗರಿಷ್ಠ ವೇಗ ಗಂಟೆಗೆ 87 ಕಿ.ಮೀ (47 ನಾಟ್ಸ್‌). ಅವುಗಳಲ್ಲಿ 1966ರ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಿದ್ದ ಚಂಡಮಾರುತವು ಅತ್ಯಂತ ಭೀಕರವಾಗಿತ್ತು.

3% ಮಾತ್ರ ಏಪ್ರಿಲ್‌ನಲ್ಲಿ ಸಂಭವಿಸಿವೆ

ಭಾರತದಲ್ಲಿ ಏಪ್ರಿಲ್‌ ತಿಂಗಳಲ್ಲಿ ಚಂಡಮಾರುತ ಸಂಭವಿಸಿದ್ದು ಕಡಿಮೆ. 1891ರಿಂದ ಇಲ್ಲಿಯವರೆಗೆ ಉತ್ತರ ಭಾರತದ ಸಮುದ್ರಗಳಿಗೆ ಅಪ್ಪಳಿಸಿದ 1528 ಚಂಡಮಾರುತ, ವಾಯುಭಾರ ಕುಸಿತ, ಭೀಕರ ಚಂಡಮಾರುತಗಳಲ್ಲಿ ಕೇವಲ ಶೇ.3ರಷ್ಟುಅಂದರೆ 45 ಮಾತ್ರ ಏಪ್ರಿಲ್‌ ತಿಂಗಳಿನಲ್ಲಿ ಸಂಭವಿಸಿವೆ. ಸಾಮಾನ್ಯವಾಗಿ ಜುಲೈ, ಫೆಬ್ರವರಿ, ಮಾರ್ಚ್ ಜನವರಿ ಮತ್ತು ಏಪ್ರಿಲ್‌ ತಿಂಗಳಲ್ಲಿ ಚಂಡಮಾರುತಗಳು ಕಾಣಿಸುವುದು ಅಪರೂಪದಲ್ಲಿ ಅಪರೂಪ.

ಫೋನಿ ಎಷ್ಟು ಭೀಕರ?

ಫೋನಿ ಚಂಡಮಾರುತವು ಒಡಿಶಾದ ಕಡಲ ತೀರಗಳಲ್ಲಿ 170-180 ಕಿ.ಮೀ ವೇಗದಲ್ಲಿ ಅಪ್ಪಳಿಸಬಹುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಹಿಂದೂ ಮಹಾ ಸಾಗರದ ಉತ್ತರ ಭಾಗದಲ್ಲಿ 2000ರದ ವರೆಗೆ ಏಪ್ರಿಲ್‌ ತಿಂಗಳಲ್ಲಿ ಅಪ್ಪಳಿಸಿದ ಚಂಡಮಾರುತಗಳನ್ನು ಮಾತ್ರ ಪರಿಗಣಿಸಿದರೆ, ಅವುಗಳಲ್ಲಿ ಫೋನಿಯ ವೇಗವೇ ಅತಿ ಹೆಚ್ಚು. ಇದಕ್ಕೂ ಮೊದಲು 2006ರಲ್ಲಿ ಮ್ಯಾನ್ಮಾರ್‌ ಮತ್ತು ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ ‘ಮಾಲಾ’ ಚಂಡಮಾರುತವು ಎರಡನೇ ಸ್ಥಾನದಲ್ಲಿದೆ.

2000ರ ವರೆಗೆ ಅಪ್ಪಳಿಸಿದ ಅತಿ ವೇಗದ ಮಾರುತಗಳು

ವರ್ಷ      ಹೆಸರು     ಗರಿಷ್ಠ ವೇಗ(ಕಿ.ಮೀ/ಗಂಟೆ)    ತಿಂಗಳು

2007    ಗೋಣು     235                           ಜನವರಿ

2001    ಚಾಪಲಾ     212                         ಅಕ್ಟೋಬರ್‌

2015    ಹೆಸರಿಲ್ಲ     212                          ಮೇ

2013    ಫೈಲಿನ್‌     212                       ಅಕ್ಟೋಬರ್‌

2007 ಸಿಡ್‌್ರ           212                      ನವೆಂಬರ್‌

2014    ನಿಲೋಫಾರ್‌    203                   ಅಕ್ಟೋಬರ್‌

2019 ಫೋನಿ    200    ಏಪ್ರಿಲ್‌

2010    ಗಿರಿ    194    ಅಕ್ಟೋಬರ್‌

2000    ಹೆಸರಿಲ್ಲ    188    ನವೆಂಬರ್‌

2006    ಮಾಲಾ    185    ಏಪ್ರಿಲ್‌

Follow Us:
Download App:
  • android
  • ios