ನವದೆಹಲಿ[ಸೆ.6]   ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದೆ.  ಸಲಿಂಗಕಾಮಿಗಳ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ವ್ಯಕ್ತಿ, ಸಂಘ-ಸಂಸ್ಥೆಗಳ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಜು.17ರಂದು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟ ಮಾಡಿದ್ದು ಚರ್ಚೆ ಹುಟ್ಟುಹಾಕಿದೆ.

ಸಲಿಂಗಕಾಮಕ್ಕೆ ಕಾನೂನಿನ ರಕ್ಷಣೆ ಇರುವ ದೇಶಗಳ ಪಟ್ಟಿಯನ್ನು ನೋಡಲೇಬೇಕಾಗುತ್ತದೆ. ಇಲ್ಲಿದೆ ವಿವರ

ಸಲಿಂಗ ಕಾಮ ಅಪರಾಧವಲ್ಲ, ಸ್ವಾಗತ ಮಾಡಿದ ಬಾಲಿವುಡ್ಡಿಗರು ಯಾರ್ಯಾರು?

* ಐಸ್ಲ್ಯಾಂಡ್ (2010)
* ಅರ್ಜೆಂಟೀನಾ (2010)
* ನ್ಯೂಜಿಲೆಂಡ್ (2013)
* ಫಿನ್ಲ್ಯಾಂಡ್ (2015)
* ಯುನೈಟೆಡ್ ಸ್ಟೇಟ್ಸ್ (2015)
* ಕೆನಡಾ (2005)
* ಸ್ಪೇನ್ (2005)
* ದಕ್ಷಿಣ ಆಫ್ರಿಕಾ (2006)
* ನಾರ್ವೆ (2008)
* ಪೋರ್ಚುಗಲ್ (2010)
* ಸ್ವೀಡನ್ (2009)
* ಡೆನ್ಮಾರ್ಕ್ (2011)
* ಉರುಗ್ವೆ (2013)
* ಫ್ರಾನ್ಸ್ (2013)
* ಬ್ರೆಜಿಲ್ (2013)
* ಯುನೈಟೆಡ್ ಕಿಂಗ್ಡಮ್ (2013)
* ಲಕ್ಸೆಂಬರ್ಗ್ (2014)
* ಐರ್ಲೆಂಡ್ (2015)
 * ಕೊಲಂಬಿಯಾ (2016)
* ಜರ್ಮನಿ (2017)
* ಮಾಲ್ಟಾ (2017)
* ಆಸ್ಟ್ರೇಲಿಯಾ (2017)
ಇದರಲ್ಲಿ ಡೆನ್ಮಾರ್ಕ್ ತನ್ನ ಸ್ವಾಯತ್ತ ಪ್ರದೇಶ ಗ್ರೀನ್ ಲ್ಯಾಂಡ್ ನಲ್ಲಿ ಕಾನೂನಿನ ಮಾನ್ಯತೆ ನೀಡಿದೆ