ಈ ದೇವಾಲಯದಲ್ಲಿ ನಿಮ್ಮ ಬೈಕ್ ಪೂಜೆ ಮಾಡೋಕೆ ಹೊಸ ಕಂಡಿಶನ್

news | Wednesday, January 17th, 2018
Suvarna Web Desk
Highlights

ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಸರ್ಕಾರ ಸಾಕಷ್ಟು ಅಭಿಯಾನ ನಡೆಸುತ್ತದೆ. ಅದಕ್ಕೆ ಒಡಿಶಾ ಪೊಲೀಸರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಭುವನೇಶ್ವರ: ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಸರ್ಕಾರ ಸಾಕಷ್ಟು ಅಭಿಯಾನ ನಡೆಸುತ್ತದೆ. ಅದಕ್ಕೆ ಒಡಿಶಾ ಪೊಲೀಸರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಇಲ್ಲಿನ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಹೊಂದಿಲ್ಲದಿದ್ದರೆ, ಅವರ ಬೈಕ್‌ಗಳ ಪೂಜೆ ಮಾಡಲ್ಲ ಎಂಬ ನಿರ್ಣಯವನ್ನು ಅರ್ಚಕರು ಕೈಗೊಳ್ಳುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಗತ್‌ಸಿಂಗ್‌ಪುರ, ಕಟಕ್ ಮತ್ತು ಪುರಿ ಜಿಲ್ಲೆಗಳಲ್ಲಿ ಅಪಾರ ಭಕ್ತರನ್ನು ಹೊಂದಿದ 1,000 ವರ್ಷ ಹಳೆಯ ಮಾಸರಳಾ ದೇವಸ್ಥಾನದ ಅರ್ಚಕರು ಈ ತೀರ್ಮಾನ ಕೈಗೊಂಡಿದ್ದಾರೆ. ಹೊಸ ಬೈಕ್ ಖರೀದಿಸಿದವರು ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸುರಕ್ಷಿತ ಚಾಲನೆಗಾಗಿ ಪ್ರಾರ್ಥಿಸುತ್ತಾರೆ.

Comments 0
Add Comment