ಇನ್ನೂ ಚಾಮರಾಜನಗರದಿಂದ ಕರೆ ಮಾಡಿದ ಸೋಮೇಶ್ವರಪ್ಪ ಎಂಬುವವರು T.C ಬದಲಾಯಿಸಿಕೊಡಲು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದಾಗ. ಇದು ನಿಜವಾದಲ್ಲಿ ನಾಳೆ ಸಂಜೆಯೊಳಗೆ ತಪ್ಪಿತಸ್ಥರನ್ನು ಮನೆಗೆ ಕಳುಹಿಸೋದಾಗಿ  ಸಚಿವರು ಉತ್ತರಿಸಿದರು.

ಹಲೋ ಮಿನಿಸ್ಟರ್.... ಸುವರ್ಣ ನ್ಯೂಸ್​​​​ನ ನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇಂದು ಅತಿಥಿಯಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್​ ಆಗಮಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮತ್ತು ಅಧಿಕಾರಿಗಳು ಸೂಕ್ತ ಉತ್ತರ ನೀಡಿ ಅನೇಕ ಸಮಸ್ಯಗಳಿಗೆ ಪರಿಹಾರ ನೀಡಿದರು.

ಹಾವೇರಿಯ ಹಾನಗಲ್ ತಾಲೂಕಿನ ಅರಿಷಿಣಗುಪ್ಪಿಯಲ್ಲಿ 70 ಸಾವಿರ ಲಂಚ ತೆಗೆದುಕೊಂಡರೂ ಟ್ರಾನ್ಸ್ ಫಾರ್ಮರ್ ಅಳವಡಿಸಿಕೊಟ್ಟಿಲ್ಲ. ಸ್ವತಃ ರೈತನೇ ಕರೆ ಮಾಡಿ ಸಚಿವರ ಬಳಿ ಅಳಲು ತೋಡಿಕೊಂಡರು. ಸಚಿವರು ನಾಳೆಯೇ ವರದಿ ನೀಡುವಂತೆ ಅಧಿಕಾರಿಗೆ ತಾಕೀತು ಮಾಡಿದರು.

ಇನ್ನೂ ಚಾಮರಾಜನಗರದಿಂದ ಕರೆ ಮಾಡಿದ ಸೋಮೇಶ್ವರಪ್ಪ ಎಂಬುವವರು T.C ಬದಲಾಯಿಸಿಕೊಡಲು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದಾಗ. ಇದು ನಿಜವಾದಲ್ಲಿ ನಾಳೆ ಸಂಜೆಯೊಳಗೆ ತಪ್ಪಿತಸ್ಥರನ್ನು ಮನೆಗೆ ಕಳುಹಿಸೋದಾಗಿ ಸಚಿವರು ಉತ್ತರಿಸಿದರು. ಇಷ್ಟೇ ಅಲ್ಲ.. ಬೆಳಗಾವಿಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದು.. ತುಮಕೂರಿನಲ್ಲಿ T.C ಸುಟ್ಟರೂ ಟಿಸಿ ಬದಲಿಸಿಲ್ಲ. ಅದರಿಂದಾದ ಬೆಳೆ ಹಾನಿ ಕೊಟ್ಟಿಲ್ಲ.. ಹೀಗೆ ಸಾಕಷ್ಟು ಸಮಸ್ಯೆಗಳನ್ನು ಕರೆ ಮಾಡಿ ಸಚಿವರ ಬಳಿ ಪರಿಹಾರ ಪಡೆದುಕೊಂಡರು.. ಇದರಲ್ಲಿ ಸಚಿವರಿಗೆ ಸಾಕಷ್ಟು ಅಭಿನಂದನೆ ಕರೆಗಳು ಬಂದಿದ್ದು ವಿಶೇಷ.

ಇಂಧನ ಇಲಾಖೆಯ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸಚಿವರು ಉತ್ತರ ನೀಡಿ ಪರಿಹರಿಸೋ ಭರವಸೆ ಕೊಟ್ಟಿದ್ದಾರೆ. ಸುವರ್ಣ ನ್ಯೂಸ್ ಇಲ್ಲಿಗೆ ಬಿಡಲ್ಲ. ಸಚಿವರ ಭರವಸೆ ಬೆನ್ನತ್ತಿ ಹೋಗೋದನ್ನು ಮರೆಯಲ್ಲ. ನೆನಪಿರಲಿ ಇದು ಪರಿಹಾರದ ಪತ್ರಿಕೋದ್ಯಮ.