ಆ.14ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಗಲೇ ಅವರ ವಿರುದ್ಧ ವಿಮಾನವನ್ನು ದುರ್ಬಳಕೆ ಮಾಡಿಕೊಂಡಿರುವ, ಭ್ರಷ್ಟಚಾರ ಪ್ರಕರಣದ ಉರುಳು ಸುತ್ತಿ ಹಾಕಿಕೊಂಡಿದ್ದು, ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್‌ಗೆ ಭ್ರಷ್ಟಾಚಾರ ತಡೆ ಸಂಸ್ಥೆಯಿಂದ ಆ.7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. 

ಪ್ರಧಾನಿಯಾಗಿ ಆ.14ರಂದು ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಇಮ್ರಾನ್ ಖಾನ್ ವಿಚಾರಣೆಗೆ ಹಾಜರಾಗುವುದು ಅನುಮಾನ. ಖೈಬರ್ ಪಖ್ತೂಂಖ್ವದಲ್ಲಿ ಇಮ್ರಾನ್ ಖಾನ್‌ರ ತೆಹ್ರಿಕ್ ಇ ಇನ್ಸಾಫ್ (ಪಿಟಿಐ)ಪಕ್ಷ ಹೆಲಿಕಾಪ್ಟರ್ ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಎದುರಿ ಸುತ್ತಿದೆ.

ಇದೇ ವೇಳೆ ಪಿಟಿಐ ಪಕ್ಷ ಸಂಸದೀಯ ಸಮಿತಿ ಇಮ್ರಾನ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಪ್ರಕಟಿಸಿದೆ.