ಕಾರು, ಬಂಗಲೆ ಬೇಡ ಎಂದಿದ್ದ ಪಾಕಿಸ್ತಾನ ನೂತನ ಪಧಾನಿ ಇಮ್ರಾನ್ ಖಾನ್ ಇದೀಗ ಕಚೇರಿಯಿಂದ ಮನೆಗೆ ತೆರಳಲು ಹೆಲಿಕಾಪ್ಟರ್ ಬಳಿಸಿ ವಿವಾದಕ್ಕೆ ಕಾರಣರಾಗಿದ್ದಾರೆ. ಅಷ್ಟಕ್ಕೂ ಇಮ್ರಾನ್ ಖಾನ್ ಹೊಸ ವಿವಾದ ಇಲ್ಲಿದೆ.

ಇಸ್ಲಾಮಾಬಾದ್‌(ಆ.30): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಒಂದೆಡೆ ಸರ್ಕಾರದಲ್ಲಿ ವೆಚ್ಚ ಕಡಿತದ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಪ್ರಧಾನಿ ಕಚೇರಿಯಿಂದ ಬನಿಗಾಲಾದಲ್ಲಿರುವ ಸ್ವಂತ ಮನೆಗೆ ತೆರಳಲು ಸರ್ಕಾರಿ ಹೆಲಿಕಾಪ್ಟರ್‌ ಬಳಸುತ್ತಿದ್ದಾರೆ. ಇದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.

ತಮ್ಮ ಪತ್ನಿ ಬುಶ್ರಾ ಮನೇಕಾ ಅವರ ಜತೆಗೂಡಿ ಇಮ್ರಾನ್‌ ಅವರು, ಕಚೇರಿಯಿಂದ ಕೆಲವೇ ಕಿ.ಮೀ. ಅಂತರದಲ್ಲಿರುವ ಮನೆಗೆ ತೆರಳಲು ಇಮ್ರಾನ್‌ ಹೆಲಿಕಾಪ್ಟರ್‌ ಬಳಸಿದ್ದರು.

ಇದನ್ನೂ ಓದಿ:ಬಂಗಲೆ, ಸೇವಕರು, ಕಾರು ಬೇಡ ಎಂದ ಇಮ್ರಾನ್‌ ಖಾನ್

ಆದರೆ ಹೆಲಿಕಾಪ್ಟರ್‌ ಬಳಕೆಯನ್ನು ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌ ಪಕ್ಷ ಸಮರ್ಥಿಸಿಕೊಂಡಿದೆ. ಇಮ್ರಾನ್‌ ಖಾನ್‌ ಹೆಲಿಕಾಪ್ಟರ್‌ನಲ್ಲಿ ಮೂರು ನಿಮಿಷದಲ್ಲಿ ತಮ್ಮ ಕಚೇರಿಯಿಂದ ಮನೆಗೆ ಹೋಗುತ್ತಾರೆ. ಅದೇ ರಸ್ತೆ ಮಾರ್ಗದ ಮೂಲಕ ಹೋಗಲು ಅವರ ಕಾರಿನ ಜೊತೆ ಭದ್ರತೆಗೆ 5ರಿಂದ 7 ಬೆಂಗಾವಲು ವಾಹನಗಳು ಬೇಕಾಗುತ್ತವೆ. ಇವುಗಳಿಗೆ ಬಳಸುವ ಇಂಧನದ ವೆಚ್ಚವನ್ನು ಲೆಕ್ಕಹಾಕಿದರೆ ಹೆಲಿಕಾಪ್ಟರ್‌ನಲ್ಲಿ ಹೋಗುವುದೇ ಅಗ್ಗ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಖಾನ್ ಗೆ ಕುರ್ಚಿ ಸಿಕ್ಕಿದ್ದೇ ತಡ : ಪಾಕ್ ಅಧಿಕಾರಿಗಳು ಗಡಗಡ