ನಿನ್ನೆ ರಾತ್ರಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗುತ್ತಿದೆ. ದೆಹಲಿ, ಗುರುಗ್ರಾಮ ಸುತ್ತಮುತ್ತ ಪ್ರದೇಶಗಳಲ್ಲಿ ಬೆಂಬಿಡದೇ ಮಳೆ ಸುರಿಯುತ್ತಿದೆ.

ಭಾರೀ ಮಳೆಯಿಂದಾಗಿ ದೆಹಲಿ ಸುತ್ತಮುತ್ತ ಟ್ರಾಫಿಕ್​ ಜಾಮ್ ಆಗಿದೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿಯುತ್ತಿದ್ದು ಹೆದ್ದಾರಿಗಳು, ರೈಲ್ವೆ ಹಳಿಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿದ್ದ ಕಾರು, ಬಸ್​ಗಳು ನೀರಿನಲ್ಲಿ ಬಹುತೇಕ ಮುಳುಗಡೆಯಾಗಿವೆ.

ದೆಹಲಿಯ ಗುರುಗ್ರಾಮ​ನಲ್ಲೂ ಭಾರೀ ಮಳೆಯಾಗ್ತಿದೆ. ಎಡೆ ಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಹುತೇಕ ರಸ್ತೆಗಳು ಟ್ರಾಫಿಕ್ ​ನಿಂದಾಗಿ ವಾಹನ ದಟ್ಟನೆ ಉಂಟಾಗಿದೆ.​

ಇತ್ತ ವಾರಣಾಸಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ..

ಮುಂಬೈನಲ್ಲೂ ಭಾರಿ ಮಳೆಯಾಗುತ್ತಿದ್ದು, ಬೆಳಗ್ಗಿನಿಂದಲೇ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲಾ ಮಳೆ ನೀರಿನಿಂದ ತುಂಬಿ ಹೋಗಿದ್ದು, ವಾಹನ ಸವಾರರು ಪರದಾಟುತ್ತಿದ್ದಾರೆ.

ಇತ್ತ ನೆರೆ ರಾಜ್ಯ ಹೈದ್ರಾಬಾದ್​ ನಲ್ಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ಕಾರು, ಬಸ್​ಗಳು ಮಳೆ ನೀರಲ್ಲಿ ಮುಳುಗಡೆಯಾಗ್ತಿರೋ ದೃಶ್ಯಗಳು ಕಂಡುಬಂದಿವೆ.