ಭೀಕರ ಮಳೆಗೆ ತತ್ತರಿಸಿದ ಉತ್ತರ ಭಾರತ| ಮಹಮಳೆಗೆ ಉತ್ತರಪ್ರದೇಶ, ಬಿಹಾರದಲ್ಲಿ 73 ಜನರ ಬಲಿ| ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣ| ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ| ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘೋಷಣೆ| ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ| ರಾಜಸ್ತಾನ ಹಾಗೂ ಮಧ್ಯಪ್ರದೇಶ ಕೂಡ ಭಾರೀ ಮಳೆ|

ಲಕ್ನೋ(ಸೆ.29): ಮಹಾಮಳೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ತತ್ತರಿಸಿದ್ದು, ಉಭಯ ರಾಜ್ಯಗಳಲ್ಲಿ ಭೀಕರ ಮಳೆಗೆ ಒಟ್ಟು 73 ಜನರು ಮೃತಪಟ್ಟಿದ್ದಾರೆ. 

ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. 

Scroll to load tweet…

ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಘೋಷಿಸಿದ್ದಾರೆ. 

Scroll to load tweet…

ಇನ್ನು ವರುಣನ ಆರ್ಭಟಕ್ಕೆ ಬಿಹಾರ ಕೂಡ ತತ್ತರಿಸಿದ್ದು, ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

Scroll to load tweet…

ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ನಿರಂತರ ಕಾರ್ಯಾಚರಣೆಗೆ ಸಿಎಂ ನಿತೀಶ್ ಕುಮಾರ್ ಆದೇಶಿಸಿದ್ದಾರೆ.

Scroll to load tweet…

ಇದೇ ವೇಳೆ ರಾಜಸ್ತಾನ ಹಾಗೂ ಮಧ್ಯಪ್ರದೇಶ ಕೂಡ ಭಾರೀ ಮಳೆಗೆ ತತ್ತರಿಸಿದ್ದು, ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Scroll to load tweet…