ಬೊಮ್ಮನಳ್ಳಿ ಬಳಿಯ ಹೊಂಗಸಂದ್ರ ವಾರ್ಡನಲ್ಲಿ ಮಳೆಯ ಅವಾಂತರಕ್ಕೆ ಸ್ಥಳೀಯರು ಕಂಗಲಾಗಿದ್ದಾರೆ.

ಬೆಂಗಳೂರು(ಅ.15) ರಾತ್ರಿ ಸುರಿದ ಧಾರಕಾರ ಮಳೆಯಿಂದ ಸಿಲಿಕಾನ್ ಸಿಟಿ ಜನ ಮತ್ತೇ ಅವಾಂತರಕ್ಕೆ ಸಿಲುಕಿದ್ದಾರೆ.

ರಸ್ತೆ ಮೇಲೆ ನಿಂತ ನೀರಿನಿಂದ ಸವಾರರು ಪರಾದಾಡುವಂತಾಗಿದೆ. ಬಿಟಿಎಂ ಲೇಔಟ್ ನಲ್ಲಿ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂಥ ಪರಿಸ್ಥಿತಿ ಎದುರಾಗಿದೆ.

ಇನ್ನು ಬೊಮ್ಮನಳ್ಳಿ ಬಳಿಯ ಹೊಂಗಸಂದ್ರ ವಾರ್ಡನಲ್ಲಿ ಮಳೆಯ ಅವಾಂತರಕ್ಕೆ ಸ್ಥಳೀಯರು ಕಂಗಲಾಗಿದ್ದಾರೆ. ಚರಂಡಿಯ ನೀರು ಮನೆಗಳಿಗೆ ನುಗ್ಗಿದೆ. ಒಟ್ಟಾರೆ ಮಳೆರಾಯನ ಆರ್ಭಟಕ್ಕೆ ಬೆಂಗಳೂರು ಮಂದಿ ನಲುಗಿ ಹೋಗಿದ್ದಾರೆ.