ಹಾಸನ ನಗರದಲ್ಲಿ ಮಧ್ಯಾಹ್ನ ಪ್ರಾರಂಭವಾದ ಮಳೆಯು ಸುಮಾರು 2 ತಾಸುಗಳ ಕಾಲ ಸುರಿಯಿತು. ಇದರಿಂದ ಜನ-ವಾಹನಗಳ ಸಂಚಾರಕ್ಕೆ ಆಡಚಣೆ ಉಂಟಾಯಿತು. ಗುಂಡಿ ಬಿದ್ದ ರಸ್ತೆಯಲ್ಲಿ ಮಳೆ ನೀರು ತುಂಬಿದ್ದರ ಪರಿಣಾಮ ವಾಹನ ಸವಾರರಿಗೆ ತೊಂದರೆಯಾಯಿತು.
ಹಾಸನ/ಮೈಸೂರು(ಅ.12): ಹಾಸನ ಹಾಗೂ ಮೈಸೂರಿನಲ್ಲಿ ಇಂದು ಧಾರಾಕಾರ ಮಳೆಯಾಗಿದೆ.
ಅಧಿ ದೇವತೆ ಹಾಸನಾಂಬೆಯ ದರ್ಶನೋತ್ಸವ ಗುರುವಾರ ಪ್ರಾರಂಭವಾಗುತ್ತಿದ್ದಂತೆ ಹಾಸನ ನಗರದ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿಯಿತು. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಗುಡುಗು ಸಹಿತ ಧಾರಾಕಾರ ಮಳೆಯಾಯಿತು.
ಹಾಸನ ನಗರದಲ್ಲಿ ಮಧ್ಯಾಹ್ನ ಪ್ರಾರಂಭವಾದ ಮಳೆಯು ಸುಮಾರು 2 ತಾಸುಗಳ ಕಾಲ ಸುರಿಯಿತು. ಇದರಿಂದ ಜನ-ವಾಹನಗಳ ಸಂಚಾರಕ್ಕೆ ಆಡಚಣೆ ಉಂಟಾಯಿತು. ಗುಂಡಿ ಬಿದ್ದ ರಸ್ತೆಯಲ್ಲಿ ಮಳೆ ನೀರು ತುಂಬಿದ್ದರ ಪರಿಣಾಮ ವಾಹನ ಸವಾರರಿಗೆ ತೊಂದರೆಯಾಯಿತು.
ಮೈಸೂರು ನಗರದಲ್ಲೂ ಇಂದು ಸಂಜೆ ಜೋರು ಮಳೆ ಸುರಿಯಿತು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕೆಲವು ಕಡೆ ಕೆರೆಯ ವಾತಾವರಣ ನಿರ್ಮಾಣವಾಗಿತ್ತು.