ಮೆಜಸ್ಟಿಕ್, ಕೃಷ್ಣರಾಜ ಮಾರುಕಟ್ಟೆ,ಚಂದ್ರ ಲೇಔಟ್, ಮಲ್ಲೇಶ್ವರಂ, ಟೌನ್'ಹಾಲ್, ಶಿವಾನಂದ ಸರ್ಕಲ್,  ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ  ಭಾರಿ ಮಳೆಯಾಗುತ್ತಿದೆ.

ಬೆಂಗಳೂರು(ಮಾ.07): ನಗರದಲ್ಲಿ ಎರಡನೇ ದಿನವೂ ಗುಡುಗು ಸಹಿತ ಧಾರಕಾರ ಮಳೆಯಾಗುತ್ತಿದ್ದು, ಹಲವು ಕಡೆ ಸಂಚಾರ ದಟ್ಟಣೆ ಉಂಟಾಗಿದೆ.

ಮೆಜಸ್ಟಿಕ್, ಕೃಷ್ಣರಾಜ ಮಾರುಕಟ್ಟೆ,ಚಂದ್ರ ಲೇಔಟ್, ಮಲ್ಲೇಶ್ವರಂ, ಟೌನ್'ಹಾಲ್, ಶಿವಾನಂದ ಸರ್ಕಲ್, ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆನಂದ್'ರಾವ್ ಸರ್ಕಲ್'ನ ಕಿನೋ ಚಿತ್ರಮಂದಿರ ಬಳಿ ನಗರದಿಂದ ಬೈಲುಹೊಂಗಲಕ್ಕೆ 35 ಪ್ರಯಾಣಿಕರೊಂದಿಗೆ ಹೋಗುತ್ತಿದ್ದ ಬಸ್ ಮಳುಗುತ್ತಿದ್ದು, ಅದೃಷ್ಟವಶಾತ್ ಜನರನ್ನು ಕಿಟಕಿ ಮೂಲಕ ರಕ್ಷಿಸಲಾಗಿದೆ.